ಮಡಿಕೇರಿ, ಮಾ. ೫: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ಬೇತ್ರಿಯ ಎಸ್.ಇ.ಎಸ್. ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಏ.೪ ರಿಂದ ೧೧ ರವರೆಗೆ ೧೭ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಶನ್ ಸಂಸ್ಥಾಪಕ ಕೆ.ಎ. ಅಬ್ದುಲ್ ರಫೀಕ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಏ. ೪ ರಿಂದ ಎಂಟು ದಿನಗಳ ಕಾಲ ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಮೊದಲ ಪುಟದಿಂದ) ಬಹುಮಾನವಾಗಿ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಹಲವಾರು
ವೈಯಕ್ತಿಕ ಪಾರಿತೋಷಕಗಳನ್ನು (ಮೊದಲ ಪುಟದಿಂದ) ಬಹುಮಾನವಾಗಿ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಹಲವಾರು
ವೈಯಕ್ತಿಕ ಪಾರಿತೋಷಕಗಳನ್ನು ಹೆಚ್ಚಿನ ಮಾಹಿತಿಗಾಗಿ ೯೪೪೯೬೯೪೨೫೭, ೯೭೪೦೬೫೮೯೧೩ ಸಂಖ್ಯೆ ಸಂಪರ್ಕಿಸುವAತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎ. ಲತೀಫ್, ಕಾರ್ಯದರ್ಶಿ ಸಿ.ಎಂ. ಅಬ್ದುಲ್ ಸಮೀರ್, ಸಹಕಾರ್ಯದರ್ಶಿ ಎಂ.ಕೆ. ಅಬ್ದುಲ್ ರಜಾಕ್, ಸದಸ್ಯರಾದ ಕೆ.ಇ. ಅಮೀರ್, ಎಂ.ಪಿ. ಹರೀಸ್ ಉಪಸ್ಥಿತರಿದ್ದರು.