ಮಡಿಕೇರಿ, ಮಾ. ೨: ಭಾಗಮಂಡಲ ನಾಡು ಅಯ್ಯಂಗೇರಿ ಗ್ರಾಮದ ಶ್ರೀ ಕೃಷ್ಣ ಚಿನ್ನತಪ್ಪ ದೇವರ ವಾರ್ಷಿಕ ಉತ್ಸವವು ತಾ. ೬ ರಿಂದ ೮ರ ವರೆಗೆ ನಡೆಯಲಿದೆ. ತಾ. ೬ ರಂದು ಬೆಳಿಗ್ಗೆ ೬.೩೦ ರಿಂದ ಬೆಳಗ್ಗಿನ ಹಬ್ಬ, ಸಂಜೆ ೭ ಗಂಟೆಯಿAದ ದಾರಾ ಪೂಜೆ ಮತ್ತು ಅಪ್ಪತ್ತು ಪೂಜೆ ನಡೆಯುತ್ತದೆ. ತಾ. ೭ ರಂದು ಮಧ್ಯಾಹ್ನ ದೊಡ್ಡ ಹಬ್ಬ ಪಟ್ಟಣಿ. ತಾ. ೮ ರಂದು ಭಂಡಾರ ಹಾಕುವುದು ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಯ್ಯಂಗೇರಿ ಶ್ರೀ ಕೃಷ್ಣ ಚಿನ್ನತಪ್ಪ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.