*ಗೋಣಿಕೊಪ್ಪಲು, ಮಾ. ೨: ಪೌತಿ ಖಾತೆ ಅರ್ಜಿಗಳು ಮಾರ್ಚ್ ೩೦ರ ಒಳಗೆ ಸಂಪೂರ್ಣ ವಿಲೇವಾರಿ ಗೊಳ್ಳಲಿದೆ ಎಂದು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆಯ ತಾ.ಪಂ. ಸಾಮಾರ್ಥ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ *ಗೋಣಿಕೊಪ್ಪಲು, ಮಾ. ೨: ಪೌತಿ ಖಾತೆ ಅರ್ಜಿಗಳು ಮಾರ್ಚ್ ೩೦ರ ಒಳಗೆ ಸಂಪೂರ್ಣ ವಿಲೇವಾರಿ ಗೊಳ್ಳಲಿದೆ ಎಂದು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆಯ ತಾ.ಪಂ. ಸಾಮಾರ್ಥ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.
ಸುಮಾರು ೯೦೦ ಅರ್ಜಿಗಳು ಪೌತಿ ಖಾತೆಯಲ್ಲಿ ಸಲ್ಲಿಕೆಯಾಗಿದ್ದು, ಶೀಘ್ರಗತಿಯಲ್ಲಿ ಪ್ರಗತಿಯ ಹಂತ ತಲುಪಿದೆ. ಮಾರ್ಚ್ ಅಂತ್ಯದಲ್ಲಿ ಸಂಪೂರ್ಣ ಅರ್ಜಿಗಳು ಇತ್ಯರ್ಥ ಗೊಳ್ಳಲಿವೆ ಎಂದು ಹೇಳಿದರು.
ಪ್ರತಿ ಇಲಾಖೆಯ ವ್ಯಾಪ್ತಿಗೆ ಸಂಬAಧಪಟ್ಟ ಆರ್.ಟಿ.ಸಿ. ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆಗೆ ಚಾಲನೆ ನೀಡಿದ್ದು, ಪ್ರಗತಿಯ ಹಂತದಲ್ಲಿದೆ. ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬAಧಪಟ್ಟ ಯಾವುದೇ ಸಮಸ್ಯೆ ಗಳಿದ್ದರೂ ಖುದ್ದಾಗಿ ಭೇಟಿಯಾಗುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು
(ಮೊದಲ ಪುಟದಿಂದ) ಎಂದು ಭರವಸೆ ನೀಡಿದರು. ೬೦ ವರ್ಷ ಮೇಲ್ಪಟ್ಟವರಿಗೆ ನೀಡುವ ಕೋವಿಡ್ ಲಸಿಕೆ ಕಾರ್ಯ ಕ್ರಮ ಬಹಳ ಉತ್ಸಾಹಕತೆಯಿಂದ ನಡೆಯುತ್ತಿದೆ. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಸಂಬAಧಪಟ್ಟ ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿದರೆ ಚುಚ್ಚುಮದ್ದನ್ನು ನೀಡಲಾಗುವುದು.
ಎರಡನೇ ಹಂತದ ಕೋವಿಡ್ ಲಸಿಕೆ ಕಾರ್ಯಕ್ರಮ ಇದಾಗಿದ್ದು, ವೀರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮವಾಗಿ ಚಾಲನೆ ನೀಡಲಾಗಿದೆ. ನಂತರ ಹಂತ ಹಂತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಅಳವಡಿಸಲು ವ್ಯವಸ್ಥೆ ಮಾಡುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ತಿಳಿಸಿದರು.
ಸೌಭಾಗ್ಯ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಕುಂಠಿತ ಗೊಂಡಿದೆ. ಗಿರಿಜನ ಹಾಡಿಗಳು ವಿದ್ಯುತ್ ಬೆಳಕು ಕಂಡಿಲ್ಲ. ಚೆಸ್ಕಾಂನ ಹಲವು ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಚೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಯುವ ಸಮುದಾಯ ಮಾದಕ ವ್ಯಸನಗಳಿಗೆ ಬಲಿಯಾಗಿ ಹಾದಿ ತಪುö್ಪತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಜಾಗೃತರಾಗಿ ಕ್ರಮಕೈಗೊಳ್ಳ ಬೇಕೆಂದು ಗೋಣಿಕೊಪ್ಪಲು ವೃತ್ತ ನಿರೀಕ್ಷಕ ರಾಮರೆಡ್ಡಿ ಅವರಿಗೆ ಹೇಳಿದರು.
ತಾಲೂಕಿನಲ್ಲಿ ರೂ. ೪ ಕೋಟಿ ೬೦ ಲಕ್ಷ ಸಾಲ ಮನ್ನಾಕ್ಕೆ ಅನುದಾನ ಬರಬೇಕಾಗಿದೆ. ಅನುದಾನ ಬಂದೊಡನೆ ಸುಮಾರು ೬೩೧ ಫಲಾನುಭವಿಗಳು ಸಾಲ ಮನ್ನಾ ಯೋಜನೆಗೆ ಒಳಪಡುತ್ತಾರೆ ಎಂದು ಸಹಕಾರ ಸಂಘದ ಅಧಿಕಾರಿ ಮೇಕೇರಿರ ಮೋಹನ್ ತಿಳಿಸಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.