ರಾಜ್ಯ ರಾಜಕೀಯದಲ್ಲಿ ‘ಸಿ.ಡಿ.' ಸಂಚಲನ
ಬೆAಗಳೂರು, ಮಾ. ೨: ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಸಿಡಿ ರಿಲೀಸ್ ಆಗಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಸಿ.ಡಿ. ರಿಲೀಸ್ ಆಗಿದೆ. ದೆಹಲಿಯ ಕರ್ನಾಟಕ ಭವನದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದು ಸರ್ಕಾರಿ ಐಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕತೆಗೆ ಬಳಸಿಕೊಂಡಿದ್ದಾರೆ. ಆಕೆಗೆ ನ್ಯಾಯ ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ರಾಸಲೀಲೆಯ ಸಿ.ಡಿ. ಸಲ್ಲಿಕೆ ಮಾಡಿದ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ರಾಸಲೀಲೆ ಸಿ.ಡಿ.ಯನ್ನು ನೀಡಿ ದೂರು ದಾಖಲಿಸಿದ್ದಾರೆ.
ಬಿಜೆಪಿ ಸೋಲಿಸುವಂತೆ ಕಿಸಾನ್ ಮೋರ್ಚಾ ಮನವಿ
ನವದೆಹಲಿ, ಮಾ. ೨: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ತನ್ನ ನಾಯಕರನ್ನು ಚುನಾವಣೆ ನಡೆಯುವ ಐದು ರಾಜ್ಯಗಳಿಗೆ ಕಳುಹಿಸಲಿದ್ದು, ಅವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಅಲ್ಲಿನ ರೈತರಿಗೆ ಮನವಿ ಮಾಡಲಿದ್ದಾರೆ ಎಂದು ರೈತ ಸಂಘಟನೆಯ ಮುಖಂಡರು ಮಂಗಳವಾರ ಹೇಳಿದ್ದಾರೆ. ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ೧೦೦ ದಿನ ಪೂರ್ಣಗೊಳಿಸುತ್ತಿರುವುದರಿಂದ ಪ್ರತಿಭಟನಾ ನಿರತ ರೈತರು ತಾ. ೬ ರಂದು ಕೆಎಂಪಿ (ವೆಸ್ಟರ್ನ್ ಪೆರಿಫೆರಲ್) ಎಕ್ಸ್ಪ್ರೆಸ್ವೇಯನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಶೇ .೭೫ ರಷ್ಟು ಉದ್ಯೋಗ
ಚಂಡಿಘಡ, ಮಾ. ೨: ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .೭೫ ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜನನಾಯಕ್ ಜಂತಾ ಪಕ್ಷ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಕಳೆದ ವರ್ಷಾಂತ್ಯದಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ಮಸೂದೆ ೨೦೨೦ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಶೀಘ್ರದಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಸಿಎಂ ಖಟ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಸೂದೆಯ ಪ್ರಕಾರ, ಈ ಮೀಸಲಾತಿ ೫೦ ಸಾವಿರ ರೂ.ಗಿಂತ ಕಡಿಮೆ ವೇತನ ಶ್ರೇಣಿಯ ಉದ್ಯೋಗಗಳಿಗೆ ಸೀಮಿತವಾಗಿದ್ದು, ೧೦ ವರ್ಷಗಳವರೆಗೆ ಅನ್ವಯಿಸುತ್ತದೆ.
ಹರಿಯಾಣ: ಸೈನಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ
ಹರಿಯಾಣ, ಮಾ. ೨ : ಹರಿಯಾಣದ ಕರ್ನಾಲ್ ಸಮೀಪವಿರುವ ಸೈನಿಕ್ ಶಾಲೆಯ ೫೪ ವಿದ್ಯಾರ್ಥಿಗಳಿಗೆ ಕೋವಿಡ್ -೧೯ ಪಾಸಿಟಿವ್ ದೃಢಪಟ್ಟಿದ್ದು, ತರಗತಿಗಳು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೈನಿಕ್ ಶಾಲೆಯ ಕುಂಜ್ಪುರದ ಮೂವರು ವಿದ್ಯಾರ್ಥಿಗಳಿಗೆ ಸೋಮವಾರ ಪಾಸಿಟಿವ್ ಬಂದಿತ್ತು. ನಂತರ ಆರೋಗ್ಯ ಇಲಾಖೆಯು ೩೯೦ ವಿದ್ಯಾರ್ಥಿಗಳು ಮತ್ತು ಶಾಲೆಯ ಸಿಬ್ಬಂದಿಗಳ ಪರೀಕ್ಷೆ ನಡೆಸಿದ್ದು, ಅದರಲ್ಲಿ ೫೪ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ ಕರ್ನಲ್ ಮುಖ್ಯ ವೈದ್ಯಾಧಿಕಾರಿ ಯೋಗೇಶ್ ಶರ್ಮಾ ಅವರು ಹೇಳಿದ್ದಾರೆ. ಶಾಲಾ ಕಟ್ಟಡ ಮತ್ತು ಅದರ ವಸತಿ ನಿಲಯಗಳನ್ನು ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ. ಹರಿಯಾಣ ಶಿಕ್ಷಣ ಇಲಾಖೆ ಕಳೆದ ವರ್ಷ ಡಿಸೆಂಬರ್ನಲ್ಲಿ ೯ ರಿಂದ ೧೨ನೇ ತರಗತಿಗಳಿಗೆ ಮತ್ತು ಫೆಬ್ರವರಿ ೨೪ ರಿಂದ ೩ ರಿಂದ ೫ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ಆರಂಭಿಸಿತ್ತು.
ಬಿಹಾರದಲ್ಲಿ ಎಲ್ಲೆಡೆ ಕೊರೋನಾ ಲಸಿಕೆ ಉಚಿತ
ಪಾಟ್ನಾ, ಮಾ. ೨: ಬಿಹಾರದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಬಿಹಾರ ಸರ್ಕಾರ ವಿಧಾನ ಸಭಾ ಚುನಾವಣೆ ವೇಳೆ ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡುವ ಭರವಸೆ ನೀಡಿತ್ತು. ಅದರಂತೆ ಈಗ ಅಸ್ತಿತ್ವದಲ್ಲಿರುವ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಚುನಾವಣಾ ಪೂರ್ವ ಭರವಸೆ ಈಡೇರಿಸಲು ಮುಂದಾಗಿದ್ದು, ಉಚಿತವಾಗಿ ಲಸಿಕೆ ನೀಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಅವರು ಇಂದು ೭೦ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಲಸಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಆರಂಭವಾಗಿದ್ದು, ೬೦ ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರತೀಯೊಬ್ಬರೂ ನಿರ್ಭೀತಿಯಿಂದ ಲಸಿಕೆಯನ್ನು ಪಡೆಯಬೇಕು. ಬಿಹಾರ ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಎಲ್ಲಾ ಸದಸ್ಯರಿಗೂ ಲಸಿಕೆ ನೀಡಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿರುವ ಪ್ರತೀಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಬಿಹಾರ ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆಯವರೂ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ ೬೦ ವರ್ಷ ಮೇಲ್ಪಟ್ಟ ೧ ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮಂಗಲ್ ಪಾಂಡೆ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ೨೫ ಕೋಟಿ ಮೌಲ್ಯದ ಹೆರಾಯಿನ್ ವಶ..!
ಕೊಲ್ಕತಾ, ಮಾ.೨: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ. ೨೫.೦೯ ಕೋಟಿ ಮೌಲ್ಯದ ೫ ಕೆಜಿಗೂ ಅಕ ಹೆರಾಯಿನ್ ಮಾದಕ ವಸ್ತುವನ್ನು ಪಶ್ಚಿಮ ಬಂಗಾಳದ ಪುರ್ಬಾ ಬಧಾಮನ್ ಜಿಲ್ಲೆಯಲ್ಲಿ ಕೊಲ್ಕತಾ ಪೊಲೀಸ್ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ವಶಪಡಿಸಿಕೊಂಡು, ಸಂಬAಧಪಟ್ಟAತೆ ಒಬ್ಬನನ್ನು ಬಂಧಿಸಿದೆ. ಈ ಬಗ್ಗೆ ಎಸ್ಟಿಎಫ್ ಹಿರಿಯ ಅಕಾರಿ ಮಾತನಾಡಿ, ಖಚಿತ ಸುಳಿವಿನ ಮೇರೆಗೆ ನಮ್ಮ ಪೊಲೀಸ್ ತಂಡ ಸೋಮವಾರ ಮಧ್ಯರಾತ್ರಿ ಇಲ್ಲಿನ ಮೆಮರಿ ಪ್ರದೇಶದಲ್ಲಿರುವ ರಸೂಲ್ಪುರ ಬಜಾರ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲರ್ ವಾಹನದಿಂದ ನಿಷಿದ್ಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದರು. ಬಜಾರ್ನಲ್ಲಿದ್ದ ಏಜೆಂಟ್ ಒಬ್ಬನಿಗೆ ಸರಕು ತಲುಪಿಸಲು ಡ್ರಗ್ಸ್ ಪೆಡ್ಲರ್ ಬಂದೇ ಬರುತ್ತಾನೆ ಎಂಬ ಮಾಹಿತಿ ನಮಗೆ ಮೊದಲೇ ತಿಳಿದಿತ್ತು. ಅವನ ಬಂದ ತಕ್ಷಣ ಕಾರನ್ನು ಸುತ್ತುವರಿದು ಆತನನ್ನು ಬಂಧಿಸಿ, ಕಾರಿನಲ್ಲಿದ್ದ ೫.೦೮ ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಯಿತು. ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.