ಕುಶಾಲನಗರ, ಮಾ. ೨: ದುಬಾರೆ ಸಾಕಾನೆ ಶಿಬಿರದಲ್ಲಿ ತಪ್ಪಿಸಿಕೊಂಡ ಕುಶ ಸಾಕಾನೆಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ನೆರೆಯ ಅರಣ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿದೆ. ಸುಮಾರು ೪೦ ರಿಂದ ೫೦ ಮಂದಿ ಸಿಬ್ಬಂದಿಗಳು ಹಲವು ತಂಡಗಳಲ್ಲಿ ದುಬಾರೆ ಸಮೀಪದ ಮಾಲ್ದಾರೆ ಮತ್ತಿತರ ಅರಣ್ಯಗಳಲ್ಲಿ ಹಗಲಿಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ೨೦೧೯ ರಲ್ಲಿ ಕುಶ ಶಿಬಿರದಿಂದ ತಪ್ಪಿಸಿಕೊಂಡಿದ್ದು ಇದುವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೇ ಆನೆಯ ಹುಡುಕಾಟ ನಡೆಸಿ ಕೂಡಲೇ ಶಿಬಿರಕ್ಕೆ ಕರೆತರುವಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.