ಸೋಮವಾರಪೇಟೆ, ಮಾ. ೨: ಹಿಂದೆAದೂ ಕಂಡರಿಯದ ಆಲಿಕಲ್ಲು ಮಳೆಯಿಂದಾಗಿ ಕೃಷಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ನ್ಯಾಯೋಚಿತವಾಗಿ ಪರಿಹಾರ ಒದಗಿಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರೈತರಿಗೆ ಭರವಸೆ ನೀಡಿದರು.ಕಳೆದ ತಾ. ೧೯.೦೨.೨೦೨೧ ರಂದು ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಅಂಕನಹಳ್ಳಿ ವ್ಯಾಪ್ತಿಯ ೧೧ ಗ್ರಾಮಗಳಿಗೆ ಇಂದು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ರೈತರು ಬೆಳೆದಿದ್ದ ಬೆಳೆಗಳು ಅಕಾಲಿಕವಾಗಿ ಸುರಿದ ಭಾರೀ ಪ್ರಮಾಣದ ಆಲಿಕಲ್ಲು ಮಳೆಗೆ ನಾಶವಾಗಿರುವುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಂಬAಧಿಸಿದ ಇಲಾಖಾಧಿಕಾರಿಗಳಿಂದ ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆದರು. ಮಧ್ಯಾಹ್ನ ೧೨ ಗಂಟೆಯಿAದ ೨ ಗಂಟೆಯವರೆಗೆ ಆಲೂರುಸಿದ್ದಾಪುರ ಗ್ರಾ.ಪಂ.ನ ಅಂಕನಹಳ್ಳಿ, ಮೆಣಸ, ಕೈಸರವಳ್ಳಿ, ಸೀಗೆಮರೂರು, ಹಂಬಳ್ಳಿ, ಮನೆಹಳ್ಳಿ, ಬೆಟ್ಟದಹಳ್ಳಿ, ಮೈಲಾದಪುರ, ನಾಗವಾರ ಸೇರಿದಂತೆ ಇತರ ಗ್ರಾಮಗಳಲ್ಲಿ ಬೆಳೆಹಾನಿ ಪರಿಶೀಲಿಸಿ, ರೈತರ ಅಹವಾಲು ಆಲಿಸಿದರು.ಈ ವ್ಯಾಪ್ತಿಯ ಸುಮಾರು ೨,೪೦೦ ಎಕರೆ ಪ್ರದೇಶದಲ್ಲಿ ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ, ಸೇರಿದಂತೆ ಹೊಲಗಳಲ್ಲಿ ಬೆಳೆದಿದ್ದ ಜೋಳ, ಹಸಿಮೆಣಸು, ಸಿಹಿಗೆಣಸು, ಮರ ಗೆಣಸು ಮುಂತಾದ ಬೆಳೆಗಳು ಆಲಿಕಲ್ಲು ಮಳೆಯಿಂದ ಸಂಪೂರ್ಣ ವಾಗಿ ನೆಲಕಚ್ಚಿತ್ತು. (ಮೊದಲ ಪುಟದಿಂದ) ಈ ಸಂಬAಧ ಉಪ ವಿಭಾಗಾಧಿಕಾರಿ, ಸೋಮವಾರಪೇಟೆ ತಹಶೀಲ್ದಾರ್, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಥಮಿಕ ಸಮೀಕ್ಷೆ ನಡೆಸಿ, ಈ ಭಾಗದಲ್ಲಿ ಶೇ.೧೦೦ರಷ್ಟು ಬೆಳೆಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಇಂದು ಖುದ್ದು ಜಿಲ್ಲಾಧಿಕಾರಿಗಳೇ ಈ ವ್ಯಾಪ್ತಿಗೆ ಭೇಟಿ ನೀಡಿ ರೈತರು ಹಾಗೂ ತೋಟಗಾರಿಕೆ, ಕೃಷಿ, ಕಂದಾಯ ಮತ್ತು ಕಾಫಿ ಮಂಡಳಿ ಅಧಿಕಾರಿಗಳಿಂದ ವಿವರಣೆ ಪಡೆದರು. ಆಲಿಕಲ್ಲು ಮಳೆಯಿಂದಾಗಿ ಎಲ್ಲಾ ಕೃಷಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಶೇ.೧೦೦ರಷ್ಟು ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖಾಧಿಕಾರಿ ಶೋಭ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ತಹಶೀಲ್ದಾರ್ ಗೋವಿಂದರಾಜು ಅವರು ಮಾತನಾಡಿ, ತಾಲೂಕಿನ ಮಟ್ಟಿಗೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಡಿಮೆ ಮಳೆ ಬೀಳುತ್ತದೆ. ರೈತರು ಕೊಳವೆ ಬಾವಿ ಮೂಲಕ ಕೃಷಿ ಕೈಗೊಳ್ಳುತ್ತಾರೆ. ಈಗ ಅಕಾಲಿಕ ಆಲಿಕಲ್ಲು ಮಳೆಯಿಂದ ಸಂಪೂರ್ಣವಾಗಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರಕಾರಕ್ಕೆ ವರದಿ ನೀಡಿ, ಪರಿಹಾರ ಒದಗಿಸಲು ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಶನಿವಾರಸಂತೆ ಉಪ ತಹಶೀಲ್ದಾರ್ ಮಧುಸೂಧನ್, ಕಂದಾಯ ಪರಿವೀಕ್ಷಕ ಕೆ.ಎಂ.ಮAಜುನಾಥ್, ಗ್ರಾಮಲೆಕ್ಕಾಧಿಕಾರಿಗಳಾದ ಸಂತೋಷ್, ವಿಶ್ವವಾಣಿ, ತೋಟಗಾರಿಕೆ ಹೋಬಳಿ ಅಧಿಕಾರಿ ಸಿಂಧು, ಶನಿವಾರಸಂತೆ ಕೃಷಿ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ವೇದಪ್ರಿಯ, ಕಾಫಿ ಮಂಡಳಿ ಸಂಪರ್ಕಾಧಿಕಾರಿ ವಿಶ್ವನಾಥ್, ಆಲೂರುಸಿದ್ದಾಪುರ ಗ್ರಾ.ಪಂ. ಪಿಡಿಒ ಪೂರ್ಣಿಮ, ಕಾರ್ಯದರ್ಶಿ ಚಂದ್ರೇಗೌಡ, ಕಂದಾಯ ಇಲಾಖೆಯ ರುದ್ರಯ್ಯ ಸೇರಿದಂತೆ ಇತರರು ಹಾಜರಿದ್ದರು.