ಕರಿಕೆ, ಮಾ.೧: ಇಲ್ಲಿನ ಸ.ಹಿ.ಪ್ರಾ. ಶಾಲೆ, ಕರಿಕೆ ಕಾಲೋನಿಯಲ್ಲಿ 'ಇಕೋ ಕ್ಲಬ್' ವತಿಯಿಂದ ಮಕ್ಕಳ ಸಂತೆ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಬಿ.ಡಿ. ನಳಿನಾಕ್ಷಿ ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಕರಿಕೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪುರುಷೋತ್ತಮ. ಶಾಲಾ ಮುಖ್ಯ ಶಿಕ್ಷಕ ಕುಮಾರ್.ಎನ್.ಎಸ್, ಶಿಕ್ಷಕಿ ಬಿ.ಟಿ.ಮಹಾಲಕ್ಷಿö್ಮ, ಎಸ್.ಡಿ.ಎಂಸಿ.ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.