ಕಡಂಗ, ಮಾ. ೧: ಕಳೆದ ೨೧ ವರ್ಷಗಳಿಂದ ಕಡಂಗ ಅರಪಟ್ಟು ಅಂಚೆ ಕಚೇರಿಯಲ್ಲಿ ನೌಕರರಾಗಿದ್ದ ಅರಪಟ್ಟು ಗ್ರಾಮದ ಕುಲ್ಲಚಂಡ ಕೆ ಸಿ ಕರುಂಬಯ್ಯ ನಿವೃತ್ತಿ ಹೊಂದಿ ದರು. ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಚೆಯ್ಯಂಡಾಣೆ, ಅರಪಟ್ಟು, ಕಕ್ಕಬ್ಬೆ, ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಕೆ. ಸಿ. ಕರುಂಬಯ್ಯ ಅವರನ್ನು ಸನ್ಮಾನಿಸಿ ದರು. ಕರುಂಬಯ್ಯ ಮಾತನಾಡಿ ಕಳೆದ ೨೧ವರ್ಷಗಳಿಂದ ತನ್ನ ಸೇವೆಯನ್ನು ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ನಡೆಸಿದ್ದಾಗಿ ನುಡಿದರು. ಅಧಿಕಾರಿಗಳಾದ ಮಂಜು, ಪರಮೇಶ್, ಅರಪಟ್ಟು ಅಂಚೆ ಕಚೇರಿಯ ಅಧಿಕಾರಿ ಧರಣಿ ಉಪಸ್ಥಿತರಿದ್ದರು.