ಮಡಿಕೇರಿ, ಮಾ. ೧; ಮಡಿಕೇರಿ ನಗರದ ಬಹುದೊಡ್ಡ ಸಮಸ್ಯೆಯಾಗಿ ರುವ ಕಸ ವಿಲೇವಾರಿ ಜಾಗದ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ಪ್ರಸ್ತುತ ಗುರುತಿಸಲಾಗಿರುವ ಜಾಗವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.

ಮಡಿಕೇರಿ ನಗರದ ಹೊರವಲಯದಲ್ಲಿರುವ ಸ್ಟೋನ್‌ಹಿಲ್ ಬಳಿ ಕಸವಿಲೇವಾರಿ ಕಾರ್ಯ ವೈಜ್ಞಾನಿಕವಾಗಿ ಆಗುತ್ತಿಲ್ಲ, ಇದರಿಂದಾಗಿ ಅಶುಚಿತ್ವದಿಂದಾಗಿ ವಾತಾವರಣ ಕಲುಷಿತಗೊಳ್ಳು ವದರೊಂದಿಗೆ ರೋಗದ ಭೀತಿ ಎದುರಾಗಿತ್ತು. ಈ ಸಂಬAಧ ಸ್ಥಳೀಯರು ಸೇರಿದಂತೆ ನಾಗರಿಕರು ಸಂಬAಧಿಸಿದವರಿಗೆ ದೂರು ಸಲ್ಲಿಸಿದ್ದಲ್ಲದೆ ಪ್ರತಿಭಟನೆ ಕೂಡ ಮಾಡಿದ್ದರು. ಅಲ್ಲದೆ, ನ್ಯಾಯಾಲಯದಲ್ಲೂ ದಾವೆ ಹೂಡಲಾಗಿತ್ತು. ಆದರೂ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನಗರದ ಸುಬ್ರಮಣ್ಯ ನಗರ, ರೈಫಲ್ ರೇಂಜ್, ವಿದ್ಯಾನಗರ ಹಾಗೂ ಕನ್ನಿಕಾ ಬಡಾವಣೆ ನಿವಾಸಿಗಳು ಸೇರಿ ಎಸ್.ಆರ್.ವಿ.ಕೆ. ಸಂಘದ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕಸ ವಿಲೇವಾರಿಗೆ ಪರ್ಯಾಯ ಜಾಗ ಗುರುತಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಅದರಂತೆ ಎರಡನೇ ಮೊಣ್ಣಂಗೇರಿಯಲ್ಲಿ ಹತ್ತು ಎಕರೆ ಸರಕಾರಿ ಜಾಗವನ್ನು ಗುರುತಿಸಲಾಗಿದೆ. ಆದರೂ ಇದುವರೆಗೆ ಕಸ ವಿಲೇವಾರಿಗೆ ಯಾವದೇ ಪ್ರಕ್ರಿಯೆ ಆರಂಭವಾಗಿಲ್ಲ. ಬದಲಿಗೆ ಪ್ರಸ್ತುತ ಗುರುತಿಸಲಾಗಿರುವ ಜಾಗದಲ್ಲಿ ಕಸ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿ ಕೆಲವರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ವಿಳಂಬ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿರುವ ನ್ಯಾಯಾಲಯ ಅರ್ಜಿದಾರರು ಹಾಗೂ ಆಕ್ಷೇಪಣಾದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ. ಕಸ ವಿಲೇವಾರಿ ಮಡಿಕೇರಿಯಲ್ಲಿ ಬಹು ದೊಡ್ಡ ಸಮಸ್ಯೆಯಾಗಿದ್ದು, ಪ್ರಸ್ತುತ ಗುರುತಿಸಲಾಗಿರುವ, ಸರಕಾರ ಮಂಜೂರು ಮಾಡಿರುವ ಜಾಗ ಕೈಬಿಟ್ಟು ಹೋದಲ್ಲಿ ಮತ್ತೆ ಇನ್ನಷ್ಟು ಸಮಸ್ಯೆ ತಲೆದೋರಲಿರುವದಾಗಿ ಅರ್ಜಿದಾರರ ಪರ ವಕೀಲರಾದ ಅನುಚೆಂಗಪ್ಪ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಆಯುಕ್ತರ ಮೇಲೆ ಮೊಕದ್ದಮೆ

ಈ ನಡುವೆ ನಿಯಮಾನುಸಾರ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ನಗರಸಭೆ ಮೇಲೆ ಕೈಗೊಂಡಿರುವ ಕ್ರಮದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದ ಸಂದರ್ಭ ಈ ಹಿಂದಿನ ಆಯುಕ್ತರುಗಳು ಸೇರಿದಂತೆ ಈಗಿನ ಆಯುಕ್ತರ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಿರುವದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಮೊಕದ್ದಮೆ ಹೂಡಿರುವ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ತಾ. ೩೧ಕ್ಕೆ ಮುಂದೂಡಲಾಯಿತು.