ಸುಂಟಿಕೊಪ್ಪ, ಮಾ. ೧: ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ಶ್ರದ್ಧಾಭಕ್ತಿಯ ಕೇಂದ್ರವಾದ ಕೆದಕಲ್ ಗ್ರಾಮದ ಶ್ರೀ ಭದ್ರಕಾಳಿ ದೇವಿ ಸನ್ನಿಧಿಯ ಹುಂಡಿಗೆ ಕಳೆದ ರಾತ್ರಿ ಕಳ್ಳರು ಕನ್ನ ಹಾಕಿದ್ದಾರೆ.
ಹೆದ್ದಾರಿ ಬದಿಯಲ್ಲೇ ಇರುವ ಭದ್ರಕಾಳಿ ದೇವಿಯ ಹುಂಡಿಗೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಸೇರಿದಂತೆ ಸನ್ನಿಧಿಗೆ ಬರುವ ಭಕ್ತರೂ ಕೂಡ ತಮ್ಮಿಂದಾದ ಕಾಣಿಕೆಯನ್ನು ಹಾಕುತ್ತಾರೆ. ಪ್ರತಿ ತಿಂಗಳ ಕೊನೆಯ ದಿನ ಈ ಹುಂಡಿಯನ್ನು ತೆಗೆದು ಅದರಲ್ಲಿರುವ ಕಾಣಿಕೆ ಹಣವನ್ನು ದೇವಾಲಯ ಸಮಿತಿಯವರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅದರಂತೆ ನಿನ್ನೆ ದಿನ ಸಂಜೆ ಸಮಿತಿಯವರು ಹುಂಡಿಯಿAದ ಹಣವನ್ನು ತೆಗೆದು ಬೀಗ ಹಾಕಿ ತೆರಳಿದ್ದರು. ನಂತರ ರಾತ್ರಿ ವೇಳೆ ಕಳ್ಳರು ಈ ಹುಂಡಿಯನ್ನು ಒಡೆದಿದ್ದಾರೆ. ಸಮಿತಿಯವರು ತೆರಳುವ ವೇಳೆ ಹುಂಡಿಯನ್ನು ಖಾಲಿ ಮಾಡಲಾಗಿತ್ತು. ಆದರೆ ಬಳಿಕ ಎಷ್ಟು ಕಾಣಿಕೆ ಹಣ ಹುಂಡಿಗೆ ಹಾಕಲ್ಪಟ್ಟಿತ್ತು ಎಂಬ ಬಗ್ಗೆ ಮಾಹಿತಿ ಸಿಗದ ಕಾರಣ ಕಳ್ಳರಿಗೆ ಹುಂಡಿಯಲ್ಲಿ ಹಣವೇನಾದರೂ ಸಿಕ್ಕಿದೆಯೆ ಅಥವಾ ಹಣ ದೋಚುವ ಕಳ್ಳರ ಪ್ರಯತ್ನ ವಿಫಲವಾಗಿದೆಯೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಲವು ಬಾರಿ ಈ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿದ್ದರು.