ಮಡಿಕೇರಿ, ಮಾ. ೧: ತಾ. ೪ ರಂದು ಮೂರ್ನಾಡಿನಲ್ಲಿ ಪ್ರಥಮ ದಾಸ ಸಾಹಿತ್ಯ ಸಮಾವೇಶ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ಕೊಡವ ಸಮಾಜದಲ್ಲಿ ಸಮಾವೇಶ ನಡೆಯಲಿದ್ದು, ಧ್ವಜಾರೋಹಣದ ಮೂಲಕ ಚಾಲನೆ ದೊರೆಯಲಿದೆ. ಮೊದಲು ನಗರದ ಮುಖ್ಯಬೀದಿಯಲ್ಲಿ ಧರ್ಮಸ್ಥಳ ಸಂಘ, ವಾಹನ ಚಾಲಕರ ಸಂಘ, ಸ್ತಿçÃಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಮಾರುತಿ ಶಾಲೆ, ಜ್ಞಾನಜೋತಿ, ಮೂರ್ನಾಡು ವಿದ್ಯಾಸಂಸ್ಥೆ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳಿಂದ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ ೧೦.೩೦ಕ್ಕೆ ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ವೇದಿಕೆ ಉದ್ಘಾಟಿಸಲಿದ್ದಾರೆ. ಮಡಿಕೇರಿ, ಮಾ. ೧: ತಾ. ೪ ರಂದು ಮೂರ್ನಾಡಿನಲ್ಲಿ ಪ್ರಥಮ ದಾಸ ಸಾಹಿತ್ಯ ಸಮಾವೇಶ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ಕೊಡವ ಸಮಾಜದಲ್ಲಿ ಸಮಾವೇಶ ನಡೆಯಲಿದ್ದು, ಧ್ವಜಾರೋಹಣದ ಮೂಲಕ ಚಾಲನೆ ದೊರೆಯಲಿದೆ. ಮೊದಲು ನಗರದ ಮುಖ್ಯಬೀದಿಯಲ್ಲಿ ಧರ್ಮಸ್ಥಳ ಸಂಘ, ವಾಹನ ಚಾಲಕರ ಸಂಘ, ಸ್ತಿçÃಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಮಾರುತಿ ಶಾಲೆ, ಜ್ಞಾನಜೋತಿ, ಮೂರ್ನಾಡು ವಿದ್ಯಾಸಂಸ್ಥೆ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳಿಂದ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ ೧೦.೩೦ಕ್ಕೆ ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ವೇದಿಕೆ ಉದ್ಘಾಟಿಸಲಿದ್ದಾರೆ. ಮೆರವಣಿಗೆಯನ್ನು ಕೊಡಗು ಜಿ.ಪಂ. ಸದಸ್ಯರಾದ ಕಲಾವತಿ ಪೂವಪ್ಪ ಉದ್ಘಾಟಿಸಲಿದ್ದು, ಪುಸ್ತಕ ಮಳಿಗೆಯನ್ನು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಮಹಾದ್ವಾರವನ್ನು ಮೂರ್ನಾಡು ಗ್ರಾ.ಪಂ. ಉಪಾಧ್ಯಕ್ಷೆ ವಿಜಯಲಕ್ಷಿö್ಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಬರೆದಿರುವ ಆಗಸ್ಟ್ ಹದಿನಾರು ಕೃತಿಯನ್ನು ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್, ಹೆಗ್ಗಣಗಳಿಗೊಂದು ಪತ್ರ ಕೃತಿಯನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಬಿಡುಗಡೆಗೊಳಿಸಲಿದ್ದಾರೆ.
(ಮೊದಲ ಪುಟದಿಂದ) ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್ ದಾಸ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ, ಮೂರ್ನಾಡು ವಿದ್ಯಾಸಂಸ್ಥೆಯ ಎಸ್.ಡಿ. ಪ್ರಶಾಂತ್ ಸಂಗೀತಕ್ಕೆ ದಾಸ ಸಾಹಿತ್ಯದ ಕೊಡಗೆ ವಿಷಯ ಮಂಡನೆ ಮಾಡಲಿದ್ದಾರೆ. ಗೀತ ಗಾಯನ ಕಾರ್ಯಕ್ರಮವನ್ನು ವೀಣಾ ಹೊಳ್ಳ ಉದ್ಘಾಟಿಸಲಿದ್ದಾರೆ.
ಸಾಧಕರಿಗೆ ಸನ್ಮಾನ : ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ವಿ.ಎ. ಗಣೇಶ್, ಹಿರಿಯ ಗಾಯಕರಾದ ವೀಣಾ ಹೊಳ್ಳ, ವತ್ಸಲ ನಾರಾಯಣ್, ರಮಾದೇವಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ದಂಬೆಕೋಡಿ ಎಸ್. ಅಯ್ಯಪ್ಪ, ಕ್ರೀಡಾ ಕ್ಷೇತ್ರ ಹೊಸೊಕ್ಲು ಚಿಣ್ಣಪ್ಪ, ಉರಗ ರಕ್ಷಕ ಹೆಚ್.ಎಸ್. ದಯಾನಂದ ಮತ್ತು ಪ್ರಜ್ವಲ್, ಸಮಾಜ ಸೇವೆ ಬಾಚೇಟಿರ ಕಮಲ ಮುದ್ದಯ್ಯ, ಕೃಷಿ ಕ್ಷೇತ್ರ ಪುದಿಯೊಕ್ಕಡ ಸೂರಜ್, ಕಟ್ಟೆಮನೆ ಪ್ರೇಮ ಗಣೇಶ್, ದಾನಿಗಳಾದ ಕರ್ನಲ್ ಪೋರೆಯಂಡ ಅಯ್ಯಪ್ಪ, ಆಶಾ, ಆನಂದ, ಬೆಂಕಿ ನಂದಿಸಿದ ತಂಡ ಬೋಜ, ಮನೋಜ್ ಅವರುಗಳನ್ನು ಸನ್ಮಾನಿಸಲಾಗುವುದು. ಪ್ರಖ್ಯಾತ ಹಿರಿಯ ಗಾಯಕ ಶಂಕರ ಶಾನಬೋಗ್ ಸಮಾರೋಪ ಭಾಷಣ ಮಾಡಲಿದ್ದಾರೆ. ಶಕ್ತಿ ದಿನಪತ್ರಿಕೆ ಸಂಪಾದಕ ಬಿ.ಜಿ. ಚಿದ್ವಿಲಾಸ್ ಆಶಯ ನುಡಿಗಳನ್ನಾಡಲಿದ್ದಾರೆ. ರಾತ್ರಿ ೮ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆೆ ಎಂದರು.
ಗೋಷ್ಠಿಯಲ್ಲಿ ಕ.ಸಾ.ಪ ಗೌರವ ಕಾರ್ಯದರ್ಶಿ ಡಾ. ಸುಭಾಷ್ ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಡಾ. ಕೆ.ಸಿ. ದಯಾನಂದ, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ ಉಪಸ್ಥಿತರಿದ್ದರು.