ಸಿದ್ದಾಪುರ, ಫೆ. ೧: ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆ ಮೇಲೆ ದಾಳಿ ನಡೆಸುವುದನ್ನು ತಡೆಗಟ್ಟಲು ಸಾಕಾನೆಗಳನ್ನು ಕಾವಲುಗಾರರಾಗಿ ಅರಣ್ಯ ಇಲಾಖೆ ಬಳಸಿಕೊಂಡಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಳೆದ ಒಂದು ವಾರಗಳಿಂದ ಕಾಡಾನೆಗಳು ಹಾಡಿಯ ನಿವಾಸಿಗಳ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಅಲ್ಲದೇ ಮನೆಯ ಆಹಾರ ಪದಾರ್ಥಗಳನ್ನು ತಿಂದು ಮನೆಯ ಬಾಗಿಲು ಮುರಿದು ಪೀಠೋಪಕರಣಗಳನ್ನು ಹಾನಿಗೊಳಿಸಿವೆ.
ಈ ಹಿನ್ನೆಲೆ ಹಾಡಿಯ ನಿವಾಸಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸು ಸಿದ್ದಾಪುರ, ಫೆ. ೧: ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆ ಮೇಲೆ ದಾಳಿ ನಡೆಸುವುದನ್ನು ತಡೆಗಟ್ಟಲು ಸಾಕಾನೆಗಳನ್ನು ಕಾವಲುಗಾರರಾಗಿ ಅರಣ್ಯ ಇಲಾಖೆ ಬಳಸಿಕೊಂಡಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಳೆದ ಒಂದು ವಾರಗಳಿಂದ ಕಾಡಾನೆಗಳು ಹಾಡಿಯ ನಿವಾಸಿಗಳ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಅಲ್ಲದೇ ಮನೆಯ ಆಹಾರ ಪದಾರ್ಥಗಳನ್ನು ತಿಂದು ಮನೆಯ ಬಾಗಿಲು ಮುರಿದು ಪೀಠೋಪಕರಣಗಳನ್ನು ಹಾನಿಗೊಳಿಸಿವೆ.
ಈ ಹಿನ್ನೆಲೆ ಹಾಡಿಯ ನಿವಾಸಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸು ದಾಳಿಯಿಂದಾಗಿ ಮನೆಗಳು ಹಾಗೂ ವಸ್ತುಗಳು ಹಾನಿಯಾಗಿರುವ ಬಗ್ಗೆ ಶಾಸಕರ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇತ್ತೀಚೆಗೆ ಕಾಡಾನೆಗಳನ್ನು ಓಡಿಸಲು ಯತ್ನಿಸಿದಾಗ ಅವರನ್ನೇ ಕಾಡಾನೆಗಳು ಬೆನ್ನಟ್ಟಿದ್ದ ಘಟನೆಯೂ ನಡೆದಿತ್ತು. ಇದೀಗ ಅರಣ್ಯ ಇಲಾಖಾಧಿಕಾರಿಗಳು ಹಾಡಿ ನಿವಾಸಿಗಳ ಮನೆ ಮೇಲೆ ಕಾಡಾನೆಗಳು ದಾಳಿ ನಡೆಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾ ಚರಣೆಯಲ್ಲಿ ಅನುಭವವಿರುವ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಭೀಮಾ ಹಾಗೂ ಶ್ರೀಕಂಠ ಎಂಬ ಎರಡು ಸಾಕಾನೆಗಳನ್ನು ಮಾವುತರೊಂದಿಗೆ ಕರೆಸಿಕೊಂಡಿದ್ದು, ರಾತ್ರಿ ಸಮಯದಲ್ಲಿ ಹಾಡಿಯಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸಲು ಹಾಗೂ ಮನೆಗೆ ಕಾಡಾನೆಗಳು ದಾಳಿ ನಡೆಸುವುದನ್ನು ತಡೆಹಿಡಿಯುವ ಕಾರ್ಯಕ್ಕೆ ನಿಯೋಜಿಸಿದ್ದಾರೆ.
ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಚೆನ್ನವೀರ ಹಾಗೂ ಸಿಬ್ಬಂದಿ ಹಾಜರಿದ್ದರು.
-ವಾಸು