
ಸೋಮವಾರಪೇಟೆೆ, ಮಾ. ೧: ಉತ್ತರ ಕೊಡಗಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ತಾ. ೧೯.೦೨.೨೦೨೧ರಂದು ಸುರಿದ ಭಾರೀ ಪ್ರಮಾಣದ ಆಲಿಕಲ್ಲು ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ನಷ್ಟವಾಗಿದ್ದು, ರೈತಾಪಿ ವರ್ಗ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದೆ.
ಈಗಾಗಲೇ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಕಾಫಿ ಮಂಡಳಿಯ ಅಧಿಕಾರಿಗಳು ಆಲಿಕಲ್ಲು ಮಳೆ ಸುರಿದ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವಾಂಶದ ವರದಿ ನೀಡಿದ್ದು, ತಾ. ಸೋಮವಾರಪೇಟೆÉ, ಮಾ. ೧: ಉತ್ತರ ಕೊಡಗಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ತಾ. ೧೯.೦೨.೨೦೨೧ರಂದು ಸುರಿದ ಭಾರೀ ಪ್ರಮಾಣದ ಆಲಿಕಲ್ಲು ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ನಷ್ಟವಾಗಿದ್ದು, ರೈತಾಪಿ ವರ್ಗ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದೆ.ಈಗಾಗಲೇ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಕಾಫಿ ಮಂಡಳಿಯ ಅಧಿಕಾರಿಗಳು ಆಲಿಕಲ್ಲು ಮಳೆ ಸುರಿದ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವಾಂಶದ ವರದಿ ನೀಡಿದ್ದು, ತಾ. ಪರಿಹಾರಕ್ಕೆ ಮೊರೆಯಿಟ್ಟಿದ್ದಾರೆ.ಉತ್ತರ ಭಾರತದ ಹಿಮಚ್ಛಾದ್ರಿತ ಪ್ರದೇಶದಂತಹ ವಾತಾವರಣ ಸೃಷ್ಟಿಸಿದ್ದ ಅಲಿಕಲ್ಲು ಮಳೆ, ಈ ಭಾಗದ ಕೃಷಿಕರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಾಫಿ ಗಿಡಗಳ ಎಲೆಗಳು ಉದುರಿದ್ದು, ಸಣ್ಣಪುಟ್ಟ ರೆಂಬೆಗಳು ಮುರಿದುಬಿದ್ದಿವೆ. ಹಸಿರಿನಿಂದ ಕೂಡಿದ್ದ ಗಿಡಗಳು ಇದೀಗ ಬರಡಾಗಿವೆ. ಗದ್ದೆಗಳಲ್ಲಿ ಕೈಗೊಂಡಿದ್ದ ಜೋಳ ಕೃಷಿ ಇನ್ನಿಲ್ಲದಂತೆ ನಿರ್ನಾಮವಾಗಿದೆ. ಹಸಿಮೆಣಸು ಗಿಡಗಳು ಸಂಪೂರ್ಣ ನಾಶವಾಗಿದ್ದು, (ಮೊದಲ ಪುಟದಿಂದ) ಗಿಡಗಳನ್ನು ನೆಟ್ಟಿದ್ದ ಕೃಷಿಕರು, ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾಳೆ, ಶುಂಠಿ, ಗೆಣಸು, ಕಾಳುಮೆಣಸು, ಸಿಹಿ ಗೆಣಸು, ಅಡಿಕೆ ಸೇರಿದಂತೆ ಇನ್ನಿತರ ಕೃಷಿಗೂ ಆಲಿಕಲ್ಲು ಮಳೆ ಆಘಾತ ನೀಡಿದೆ.ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಳ್ಳಿ, ಗಂಗವಾರ, ಸೀಗೆಮರೂರು, ಮೆಣಸ, ಬೆಟ್ಟದಳ್ಳಿ, ಮನೆಹಳ್ಳಿ, ನಾಗವಾರ, ಮೈಲಾತ್ಪುರ, ಬಡುಬನಹಳ್ಳಿ, ಅಮ್ಮಳ್ಳಿ, ಕೈಸರವಳ್ಳಿ, ನಿಡ್ತ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಹಿನ್ನೆಲೆ ಕೃಷಿಕರ ಬದುಕು ದುಸ್ತರವಾಗಿದೆ.
ಈ ಭಾಗಕ್ಕೆ ಈಗಾಗಲೇ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖಾ ಅಧಿಕಾರಿಗಳು ಸೇರಿದಂತೆ, ತಾಲೂಕು ತಹಶೀಲ್ದಾರ್ ಗೋವಿಂದರಾಜು, ಎ.ಸಿ. ಈಶ್ವರ್ಕುಮಾರ್ ಖಂಡು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ಅಂದಾಜಿನ ಪ್ರಕಾರ ೫೫೧ ಹೆಕ್ಟೇರ್ನಲ್ಲಿ ಬೆಳೆದಿದ್ದ ಕೃಷಿ ಫಸಲು ನಷ್ಟಗೊಂಡಿದ್ದು, ೪೩೮ ಮಂದಿ ಕೃಷಿಕರು ಈಗಾಗಲೇ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಸಂಖ್ಯೆ ಇನ್ನೂ ಏರಿಕೆಯಾಗುತ್ತಲೇ ಇದೆ.
ಗ್ರಾಮವಾರು ನಷ್ಟದ ವಿವರ :
ಅಂಕನಹಳ್ಳಿ: ೧೫ ಎಕರೆ ಜೋಳ, ೩೦ ಎಕರೆ ಕಾಳುಮೆಣಸು, ೧೫ ಎಕರೆ ಹಸಿ ಮೆಣಸಿನಕಾಯಿ, ೧೦ ಎಕರೆ ಬಾಳೆ, ೧೦ ಎಕರೆ(ಮೊದಲ ಪುಟದಿಂದ) ಗಿಡಗಳನ್ನು ನೆಟ್ಟಿದ್ದ ಕೃಷಿಕರು, ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾಳೆ, ಶುಂಠಿ, ಗೆಣಸು, ಕಾಳುಮೆಣಸು, ಸಿಹಿ ಗೆಣಸು, ಅಡಿಕೆ ಸೇರಿದಂತೆ ಇನ್ನಿತರ ಕೃಷಿಗೂ ಆಲಿಕಲ್ಲು ಮಳೆ ಆಘಾತ ನೀಡಿದೆ.
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಳ್ಳಿ, ಗಂಗವಾರ, ಸೀಗೆಮರೂರು, ಮೆಣಸ, ಬೆಟ್ಟದಳ್ಳಿ, ಮನೆಹಳ್ಳಿ, ನಾಗವಾರ, ಮೈಲಾತ್ಪುರ, ಬಡುಬನಹಳ್ಳಿ, ಅಮ್ಮಳ್ಳಿ, ಕೈಸರವಳ್ಳಿ, ನಿಡ್ತ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಹಿನ್ನೆಲೆ ಕೃಷಿಕರ ಬದುಕು ದುಸ್ತರವಾಗಿದೆ.
ಈ ಭಾಗಕ್ಕೆ ಈಗಾಗಲೇ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖಾ ಅಧಿಕಾರಿಗಳು ಸೇರಿದಂತೆ, ತಾಲೂಕು ತಹಶೀಲ್ದಾರ್ ಗೋವಿಂದರಾಜು, ಎ.ಸಿ. ಈಶ್ವರ್ಕುಮಾರ್ ಖಂಡು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ಅಂದಾಜಿನ ಪ್ರಕಾರ ೫೫೧ ಹೆಕ್ಟೇರ್ನಲ್ಲಿ ಬೆಳೆದಿದ್ದ ಕೃಷಿ ಫಸಲು ನಷ್ಟಗೊಂಡಿದ್ದು, ೪೩೮ ಮಂದಿ ಕೃಷಿಕರು ಈಗಾಗಲೇ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಸಂಖ್ಯೆ ಇನ್ನೂ ಏರಿಕೆಯಾಗುತ್ತಲೇ ಇದೆ.
ಗ್ರಾಮವಾರು ನಷ್ಟದ ವಿವರ :
ಅಂಕನಹಳ್ಳಿ: ೧೫ ಎಕರೆ ಜೋಳ, ೩೦ ಎಕರೆ ಕಾಳುಮೆಣಸು, ೧೫ ಎಕರೆ ಹಸಿ ಮೆಣಸಿನಕಾಯಿ, ೧೦ ಎಕರೆ ಬಾಳೆ, ೧೦ ಎಕರೆ ಶುಂಠಿ, ೫ ಎಕರೆ ಸಿಹಿಗೆಣಸು, ೧೫ ಎಕರೆ ಅಡಿಕೆ, ೬೦ ಎಕರೆ ಕಾಫಿಗೆ ಆಲಿಕಲ್ಲುಮಳೆಯಿಂದ ನಷ್ಟವಾಗಿದೆ.
ಗಂಗವಾರ: ೧೦ ಎಕರೆ ಜೋಳ, ೪೦ ಎಕರೆ ಕಾಳುಮೆಣಸು, ೨೦ ಎಕರೆ ಹಸಿ ಮೆಣಸಿನಕಾಯಿ, ೧೫ ಎಕರೆ ಬಾಳೆ, ೧೦ ಎಕರೆ ಶುಂಠಿ, ೫ ಎಕರೆ ಸಿಹಿಗೆಣಸು, ೮ ಎಕರೆ ಅಡಿಕೆ, ೭೦ ಎಕರೆ ಕಾಫಿಗೆ ಆಲಿಕಲ್ಲುಮಳೆಯಿಂದ ಶುಂಠಿ, ೫ ಎಕರೆ ಸಿಹಿಗೆಣಸು, ೧೫ ಎಕರೆ ಅಡಿಕೆ, ೬೦ ಎಕರೆ ಕಾಫಿಗೆ ಆಲಿಕಲ್ಲುಮಳೆಯಿಂದ ನಷ್ಟವಾಗಿದೆ.
ಗಂಗವಾರ: ೧೦ ಎಕರೆ ಜೋಳ, ೪೦ ಎಕರೆ ಕಾಳುಮೆಣಸು, ೨೦ ಎಕರೆ ಹಸಿ ಮೆಣಸಿನಕಾಯಿ, ೧೫ ಎಕರೆ ಬಾಳೆ, ೧೦ ಎಕರೆ ಶುಂಠಿ, ೫ ಎಕರೆ ಸಿಹಿಗೆಣಸು, ೮ ಎಕರೆ ಅಡಿಕೆ, ೭೦ ಎಕರೆ ಕಾಫಿಗೆ ಆಲಿಕಲ್ಲುಮಳೆಯಿಂದ ಬಾಳೆ, ೫ ಎಕರೆ ಶುಂಠಿ, ೧೦ ಎಕರೆ ಸಿಹಿಗೆಣಸು, ೮ ಎಕರೆ ಅಡಿಕೆ, ೧೫ ಎಕರೆ ಕಾಫಿ.
ಕೈಸರವಳ್ಳಿ: ೨೦ ಎಕರೆ ಜೋಳ, ೩೦ ಎಕರೆ ಹಸಿ ಮೆಣಸಿನಕಾಯಿ, ೧೦ ಎಕರೆ ಬಾಳೆ, ೭ ಎಕರೆ ಶುಂಠಿ, ೫ ಎಕರೆ ಸಿಹಿಗೆಣಸು, ೫ ಎಕರೆ ಅಡಿಕೆ ಕೃಷಿಗೆ ನಷ್ಟವಾಗಿರುವ ಬಗ್ಗೆ ಇಲಾಖಾಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ಆಲಿಕಲ್ಲು ಮಳೆಯಿಂದಾಗಿ ಈ ಗ್ರಾಮಗಳಲ್ಲಿ ಒಟ್ಟು ೧೭೫ ಎಕರೆ ಜೋಳ (ಅಂದಾಜು ೩೫ ಲಕ್ಷ ನಷ್ಟ), ೨೪೦ ಎಕರೆ ಕಾಳುಮೆಣಸು (ಅಂದಾಜು ೩೬ ಲಕ್ಷ ನಷ್ಟ), ೧೪೩ ಎಕರೆ ಹಸಿಮೆಣಸಿನಕಾಯಿ (ಅಂದಾಜು ೨೧.೪೫ ಲಕ್ಷ ನಷ್ಟ), ೧೩೭ ಎಕರೆ ಬಾಳೆ (ಅಂದಾಜು ೨೦.೫೫ ಲಕ್ಷ ನಷ್ಟ), ೧೦೯ ಎಕರೆ ಶುಂಠಿ (ಅಂದಾಜು ೧೬.೩೫ ಲಕ್ಷ ನಷ್ಟ), ೯೩ ಎಕರೆ ಸಿಹಿಗೆಣಸು (ಅಂದಾಜು ೧೩.೯೫ ಲಕ್ಷ ನಷ್ಟ), ೧೪೮ ಎಕರೆ ಅಡಿಕೆ (ಅಂದಾಜು ೨೨.೨೦ ಲಕ್ಷ ನಷ್ಟ), ೫೧೦ ಎಕರೆ ಕಾಫಿ (ಅಂದಾಜು ೧೫೩ ಲಕ್ಷ ನಷ್ಟ)ಗೆ ಹಾನಿಯಾಗಿರುವ ಬಗ್ಗೆ ವರದಿ ತಯಾರಿಸಲಾಗಿದೆ.
ವಿವಿಧ ಬೆಳೆಗಳ ಹಾನಿಯಿಂದಾಗಿ ಬೆಳೆಗಾರರಿಗೆ ಒಟ್ಟು ರೂ.೩.೧೮ ಕೋಟಿ ನಷ್ಟವಾಗಿದ್ದು, ಬೆಳೆ ದತ್ತಾಂಶದಲ್ಲಿ ನಮೂದಿಸಿ, ಪರಿಹಾರ ಒದಗಿಸಲು ವಿಶೇಷ ಅನುಮತಿ ನೀಡಬೇಕೆಂದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಸಮಿತಿಗೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಆಲಿಕಲ್ಲು ಮಳೆಯಿಂದ ಈ ಭಾಗದ ಕೃಷಿಕರು ಭಾರೀ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಸರ್ಕಾರದಿಂದ ಗರಿಷ್ಠ ಪರಿಹಾರ ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ. ಮುಂದಿನ ವರ್ಷದ ಕಾಫಿ ಫಸಲು ಕನಸಾಗಿದೆ. ಎಲೆಗಳು ಉದುರಿರುವದರಿಂದ ಈ ಬೇಸಿಗೆಯಲ್ಲಿ ಅರೇಬಿಕಾ ಕಾಫಿ ಗಿಡಗಳು ಉಳಿಯುವುದು ಕಷ್ಟಸಾಧ್ಯ. ಕಾಫಿಯೊಂದಿಗೆ ಇತರ ಕೃಷಿಯೂ ಹಾನಿಗೀಡಾಗಿರುವದರಿಂದ ರೈತರ ಬವಣೆ ಹೇಳತೀರದ್ದಾಗಿದೆ. ಅಧಿಕಾರಿಗಳು ಹೆಚ್ಚಿನ ಪರಿಹಾರ ಒದಗಿಸಿ ಕೃಷಿಕರ ನೆರವಿಗೆ ಧಾವಿಸಬೇಕಿದೆ ಎಂದು ನಿಡ್ತ ಗ್ರಾಮದ ಚರಣ್, ಸಂತೋಷ್, ಧರ್ಮಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಭೇಟಿ: ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಾ. ೨ ರಂದು (ಇಂದು) ಜಿಲ್ಲಾಧಿಕಾರಿ ಚಾರುಲತ ಸೋಮಲ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ ಸೋಮವಾರಪೇಟೆ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ೧೦.೩೦ಕ್ಕೆ ಹಾನಿಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
-ವಿಜಯ್ ಹಾನಗಲ್