* ಜನತೆ ಸ್ವಯಂ ಜಾಗೃತಿ ವಹಿಸುವ ಅಗತ್ಯತೆ * ಪೊಲೀಸ್ ಇಲಾಖೆಯಿಂದಲೂ ಕಟ್ಟೆಚ್ಚರ ಅನಿವಾರ್ಯ

ಮಡಿಕೇರಿ, ಫೆ. ೨೮: ಕೊಡಗು ಜಿಲ್ಲೆಯಲ್ಲಿ ಏಕಾಏಕಿ ಕೆಲವು ದಿನಗಳಿಂದ ಅಲ್ಲಲ್ಲಿ ಕೇಳಿಬರುತ್ತಿರುವ ಅಪರಾಧ ಪ್ರಕರಣಗಳಿಂದಾಗಿ ಒಂದು ರೀತಿಯಲ್ಲಿ ಜನತೆ ಆತಂಕಗೊಳ್ಳು ವಂತಾಗಿದೆ. ಜಿಲ್ಲೆ ಗುಡ್ಡಗಾಡು ಪ್ರದೇಶ ವಾಗಿದ್ದು, ನಗರ ಪ್ರದೇಶಗಳಿಗಿಂತ ವಿಭಿನ್ನವಾಗಿರುವ ಪ್ರದೇಶವಾಗಿದೆ. ಇಲ್ಲಿ ಸಹಜವಾಗಿ ಜನನಿಬಿಡ ಸ್ಥಳಗಳಿಗಿಂತ ಒಂಟಿ ಮನೆಗಳು ಹೆಚ್ಚಿವೆ.

ಸ್ಥಳೀಯ ಜನರು ಅವರವರ ಪಾಡಿಗೆ ತಮ್ಮ-ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಇದೀಗ ಒಂದೊAದಾಗಿ ವರದಿಯಾಗುತ್ತಿರುವ ಕೆಲವು ಅಪರಾಧ ಕೃತ್ಯಗಳು ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸುವಂತೆ ಮಾಡಿವೆ.

ಪ್ರಸ್ತುತ ಕಾಫಿ ತೋಟದ ಕೆಲಸಗಳು ಸೇರಿದಂತೆ ಇತರ ಕಟ್ಟಡ ಕಾಮಗಾರಿಗಳು, ರಸ್ತೆ ಕೆಲಸಗಳು, ಹಲವು ರೀತಿಯ ವ್ಯಾಪಾರ ವಹಿವಾ ಟುಗಳು ಭರದಿಂದ ಸಾಗುತ್ತಿದ್ದು, ಇದಕ್ಕಾಗಿ ಹಲವು ಹೊಸ ಮುಖಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಪ್ರಸ್ತುತದ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಮಡಿಕೇರಿ, ಫೆ. ೨೮: ಕೊಡಗು ಜಿಲ್ಲೆಯಲ್ಲಿ ಏಕಾಏಕಿ ಕೆಲವು ದಿನಗಳಿಂದ ಅಲ್ಲಲ್ಲಿ ಕೇಳಿಬರುತ್ತಿರುವ ಅಪರಾಧ ಪ್ರಕರಣಗಳಿಂದಾಗಿ ಒಂದು ರೀತಿಯಲ್ಲಿ ಜನತೆ ಆತಂಕಗೊಳ್ಳು ವಂತಾಗಿದೆ. ಜಿಲ್ಲೆ ಗುಡ್ಡಗಾಡು ಪ್ರದೇಶ ವಾಗಿದ್ದು, ನಗರ ಪ್ರದೇಶಗಳಿಗಿಂತ ವಿಭಿನ್ನವಾಗಿರುವ ಪ್ರದೇಶವಾಗಿದೆ. ಇಲ್ಲಿ ಸಹಜವಾಗಿ ಜನನಿಬಿಡ ಸ್ಥಳಗಳಿಗಿಂತ ಒಂಟಿ ಮನೆಗಳು ಹೆಚ್ಚಿವೆ.

ಸ್ಥಳೀಯ ಜನರು ಅವರವರ ಪಾಡಿಗೆ ತಮ್ಮ-ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಇದೀಗ ಒಂದೊAದಾಗಿ ವರದಿಯಾಗುತ್ತಿರುವ ಕೆಲವು ಅಪರಾಧ ಕೃತ್ಯಗಳು ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸುವಂತೆ ಮಾಡಿವೆ.

ಪ್ರಸ್ತುತ ಕಾಫಿ ತೋಟದ ಕೆಲಸಗಳು ಸೇರಿದಂತೆ ಇತರ ಕಟ್ಟಡ ಕಾಮಗಾರಿಗಳು, ರಸ್ತೆ ಕೆಲಸಗಳು, ಹಲವು ರೀತಿಯ ವ್ಯಾಪಾರ ವಹಿವಾ ಟುಗಳು ಭರದಿಂದ ಸಾಗುತ್ತಿದ್ದು, ಇದಕ್ಕಾಗಿ ಹಲವು ಹೊಸ ಮುಖಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಪ್ರಸ್ತುತದ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಮನೆಯೊಂದರಲ್ಲೂ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಈ ಮೂರು ಪ್ರಕರಣಗಳು ಕೇವಲ ಮೂರು ದಿನಗಳಲ್ಲಿ ನಡೆದಿದೆ. ಈ ಬಗ್ಗೆ ಇಡೀ ಜಿಲ್ಲೆ ಜಾಗೃತಗೊಳ್ಳಬೇಕಾಗಿದ್ದು, ಅಪರಿಚಿತರ ಬಗ್ಗೆ ಹಾಗೂ ಸಂಶಯವಿರುವ ಸ್ಥಳೀಯ ವ್ಯಕ್ತಿಗಳ ಬಗ್ಗೆಯೂ ಹೆಚ್ಚು ನಿಗಾವಹಿಸ ಬೇಕಿರುವುದು ಅನಿವಾರ್ಯವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿರುವುದು ಶ್ಲಾಘನೀಯವಾಗಿದೆ. ಆದರೂ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಕಟ್ಟೆಚ್ಚರದೊಂದಿಗೆ ಜನತೆ ಯಲ್ಲಿ ಧೈರ್ಯ ತುಂಬುವುದ ರೊಂದಿಗೆ ನಡೆದಿರುವ ಇತರ ಅಪರಾಧ ಕೃತ್ಯಗಳನ್ನು ಬಯಲಿಗೆಳೆಯಲೇ ಬೇಕಾಗಿದೆ.

ಶ್ರೀಮಂಗಲ ಪ್ರಕರಣ: ಅಪರಿಚಿತ ವ್ಯಕ್ತಿಯಿಂದಲೇ...?

ಶ್ರೀಮAಗಲದ ಕುರ್ಚಿ ಗ್ರಾಮದಲ್ಲಿ ಬೊಳ್ಳೆರ ತಿಮ್ಮಯ್ಯ ಎಂಬವರು ಒಬ್ಬರೇ ಇದ್ದ ಸಂದರ್ಭ ಅವರ ಮನೆಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾನೆ. ಈ ಘಟನೆಯ ಕುರಿತು ಅವಲೋಕಿಸಿದರೆ ಕೃತ್ಯ ನಡೆಸಿದ ವ್ಯಕ್ತಿ ಹೊರಗಿನವನೆನ್ನುವ ಸಂಶಯ ಬರುತ್ತದೆ. ಕೊಡವ ಸಾಂಪ್ರದಾಯಿಕ ಆಭರಣವಾದ ಪೀಚೆಕತ್ತಿಯನ್ನು ನೋಡಿ ಇದೇನೆಂದು ವಿಚಾರಿಸಿದ್ದನ್ನು ಗಮನಿಸಿದರೆ ಈ ವ್ಯಕ್ತಿ ಸ್ಥಳಿಕನಲ್ಲ ಎಂಬ ಗುಮಾನಿ ಸಹಜವಾಗಿ ಬರುತ್ತದೆ.

ಕೆ. ನಿಡುಗಣೆ ಕೊಲೆ ಪ್ರಕರಣ

ಕೆ. ನಿಡುಗಣೆ ಗ್ರಾಮದಲ್ಲಿ ನಡೆದಿರುವ ಮಹಿಳೆ ಲಲಿತಾ ಅವರ ಕೊಲೆ ಪ್ರಕರಣವೂ ಸಾಕಷ್ಟು ಸಂಶಯಗಳನ್ನು ಮೂಡಿಸಿದೆ. ಈ ಕೃತ್ಯದಲ್ಲಿ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಸಂಶಯ ಇರುವುದು ಒಂದೆಡೆಯಾದರೆ ಸ್ಥಳೀಯವಾಗಿ ಇವರ ಬಗ್ಗೆ ಹೆಚ್ಚು ಮಾಹಿತಿ ಹೊಂದಿರುವವರಿAದಲೇ ಕೃತ್ಯ ನಡೆದಿರುವ ಸಾಧ್ಯತೆಗಳ ಬಗ್ಗೆ ಜನವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಮಹಿಳೆ ಲಲಿತಾ ತಮ್ಮ ಬಚ್ಚಲು ಮನೆಯಲ್ಲಿ ನೀರು ಕಾಯಿಸಲು ಬೆಂಕಿ ಹಚ್ಚುವ ವೇಳೆಯಲ್ಲಿ ಕಾದು ನಿಂತು ಕೊಲೆ ಮಾಡಿರುವುದು ಹಾಗೂ ಕಾಫಿ ಮಾರಾಟದ ಕೆಲವೇ ದಿನದಲ್ಲಿ ಈ ಕೃತ್ಯ ನಡೆಸಿರುವುದು, ಮಾಜಿ ಯೋಧರ ಪತ್ನಿಯಾಗಿದ್ದ ಇವರ ಮನೆಯಲ್ಲಿ ಸಂಗ್ರಹವಿದ್ದ ಮದ್ಯದ ಬಾಟಲಿಗಳನ್ನು ಸಾಗಿಸಿ ಅನತಿ ದೂರದಲ್ಲಿ ಅವಿಸಿಟ್ಟಿದ್ದು, ಚಿನ್ನಾಭರಣ ಅಪಹರಿಸಿದರೂ ಇವರ ಮನೆಯಲ್ಲಿದ್ದ ಕೋವಿಯನ್ನು ಅಲ್ಲಿಯೇ ಬಿಟ್ಟು ಹೋಗಿರುವುದು... ಈ ರೀತಿಯ ಹಲವು ಅಂಶಗಳು ವಿವಿಧ ಸಂಶಯಗಳನ್ನು ಸೃಷ್ಟಿಸಿವೆ.

ಕೆ. ನಿಡುಗಣೆ ವ್ಯಾಪ್ತಿಯ ಅಂಗಡಿಯೊAದರಲ್ಲಿ ಕೆಲವು ಸಮಯದ ಹಿಂದೆ ಕಾಫಿ ಹಾಗೂ ಸಾಮಗ್ರಿ ಕಳುವಾಗಿರುವ ಪ್ರಕರಣವೊಂದು ನಡೆದಿದ್ದು, ಇದೂ ಇನ್ನೂ ಕೂಡ ಪತ್ತೆಯಾಗಿಲ್ಲ... ಈ ಹಿಂದೆ ಇಲ್ಲಿನ ಭಗವತಿ ದೇವಾಲಯ ದಲ್ಲಿ ನಡೆದಿರುವ ಕಳ್ಳತನವೂ ಪತ್ತೆ ಹಚ್ಚಲ್ಪಟ್ಟಿಲ್ಲ... ಈ ವಿಚಾರದ ಬಗ್ಗೆ ಪೊಲೀಸರು ಹೆಚ್ಚಿನ ಮುತುವರ್ಜಿ ತೋರಬೇಕಾಗಿದೆ ಎಂದು ಕೆ. ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡೀನ್ ಬೋಪಣ್ಣ ಅವರು ಆಗ್ರಹಿಸಿ ದ್ದಾರೆ. ಈ ಪ್ರದೇಶ ಪ್ರವಾಸಿ ಸ್ಥಳವೂ ಆಗಿರು ವುದರಿಂದ ಅಪರಿಚಿತರ ಬಗ್ಗೆಯೂ ಹೆಚ್ಚು ನಿಗಾ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಜಿಲ್ಲೆಯ ಹಲವೆಡೆಗಳಲ್ಲಿ ವ್ಯಾಪಾರದ ಸೋಗಿನಲ್ಲಿ ಹಲವಾರು ಅಪರಿಚಿತ ವ್ಯಕ್ತಿಗಳು ಮನೆ ಮನೆಗೆ ತೆರಳುತ್ತಿದ್ದು, ಈ ಬಗ್ಗೆ ಜನತೆಯೇ ಸ್ವಯಂ ಜಾಗೃತಿ ವಹಿಸಬೇಕಿದೆ.

- ಶಶಿ ಸೋಮಯ್ಯ.