ಮಡಿಕೇರಿ, ಫೆ. ೨೮: ಕೇರಳದ ಕ್ಯಾಲಿಕೆಟ್ನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಥ್ಲೆಟಿಕ್ಸ್ನಲ್ಲಿ ೧೬ರ ವಯೋಮಿತಿಯಲ್ಲಿ ನಿನ್ನೆ ೮೦ ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇಂದು ಮತ್ತೊಂದು ಚಿನ್ನದ ಪದಕ ಗಳಿಸಿದ್ದಾಳೆ
೩೦೦ ಮೀಟರ್ ಸ್ಪರ್ಧೆಯಲ್ಲಿಯೂ ಉನ್ನತಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು (೪೧.೨೪ ಸೆಕೆಂಡ್) ಸಾಧನೆ ಮಾಡಿದ್ದಾಳೆ. ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ಸ್ಪರ್ಧೆಯಲ್ಲೂ ಈಕೆ ಎರಡು ರಾಷ್ಟಿçÃಯ ದಾಖಲೆ ಮಾಡಿದ್ದಾಳೆ. ಕೊಡಗಿನವರಾದ ಡಬಲ್ ಒಲಂಪಿಯನ್ ಖ್ಯಾತಿಯ ಪ್ರಮೀಳಾ ಅಯ್ಯಪ್ಪ ಹಾಗೂ ಅಥ್ಲೆಟಿಕ್ಸ್ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಅವರ ಪುತ್ರಿಯಾದ ಉನ್ನತಿ ಪೋಷಕರಂತೆ ಸಾಧನೆ ತೋರುತ್ತಿರುವುದು ಜಿಲ್ಲೆಗೂ ಹಿರಿಮೆಯಾಗಿದೆ.