ಫೆಬ್ರವರಿ ೨೮ನೇ ತಾರೀಖನ್ನು ರಾಷ್ಟಿçÃಯ ವಿಜ್ಞಾನ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಫೆ. ೨೮ನೇ ದಿನಾಂಕದAದು ವಿಜ್ಞಾನ ಚಟುವಟಿಕೆಗಳನ್ನು ಕೇಂದ್ರೀಕರಿಸುವ ಸದುದ್ಧೇಶದ ದೃಷ್ಟಿಯಿಂದ ರಾಷ್ಟಿçÃಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಅಂದು ವಿಜ್ಞಾನದ ಆವಿಸ್ಕಾರ, ವೈಜ್ಞಾನಿಕ ಸಂಶೋಧನೆಗಳು, ವಿಜ್ಞಾನಿಗಳ ಮಹತ್ವಪೂರ್ಣ ಸಾಧನೆಗಳು, ಅವರ ಅಮೂಲ್ಯ ಜೀವನ ಚರಿತ್ರೆಗಳು ಇವೇ ಮೊದಲಾದವುಗಳ ಹಿನ್ನೆಲೆಯಲ್ಲಿ ದಿನದ ಮಹತ್ವವನ್ನು ಸ್ಮರಿಸಲಾಗುವುದು. ಇಂದು ಜ್ಞಾನ ಮತ್ತು ತಾಂತ್ರಿಕ ಜ್ಞಾನಗಳು ಅಗಾಧವಾಗಿ ಬೆಳೆದಿವೆ. ವಿಜ್ಞಾನದ ಪ್ರತಿಯೊಂದು ಶಾಖೆಯು ಒಂದಲ್ಲ ಒಂದು ರೀತಿ ಜನತೆಗೆ ಉಪಯುಕ್ತವಾಗಿದೆ. ಆದರೆ ಅದನ್ನು ಉಪಯೋಗ ಮಾಡಿಕೊಳ್ಳುವುದು, ಬಿಡುವುದು ಜನತೆಗೆ ಸೇರಿದ್ದು. ನಮ್ಮ ಭಾರತ ದೇಶ ಹಲವಾರು ಮಂದಿ ಗಣಿತ ಶಾಸ್ತçಜ್ಞರು ಹಾಗೂ ವಿಜ್ಞಾನಿಗಳಿಗೆ ಜನ್ಮವಿತ್ತಿದೆ.

೧೮೮೮ನೇ ನವೆಂಬರ್ ೭ರಂದು ಕಾವೇರಿ ನದಿ ತೀರದ ತಿರುಚಿರಪಳ್ಳ ಎಂಬ ಪಟ್ಟಣದಲ್ಲಿ ತಂದೆ ಚಂದ್ರಶೇಖರ್ ಐಯ್ಯರ್, ತಾಯಿ ಗುಣಶೀಲೆಯಾದ ಪಾರ್ವತಿ ಅಮ್ಮಾಳ್ ಮನೆಯಲ್ಲಿ ಸರ್ ಸಿ.ವಿ. ರಾಮನ್ ಜನಿಸಿದರು. ಈ ದಿನವನ್ನು ಇಂದು ರಾಷ್ಟಿçÃಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಜರ್ಮನಿ ವಿಜ್ಞಾನಿ ಹೆಲ್‌ಮೋಲ್ಟ್÷್ಸ ಹಾಗೂ ಧ್ವನಿ ವಿಜ್ಞಾನಿ ಲಾರ್ಡ್ ರ‍್ಯಾಲೇಯವರು ಸರ್. ಸಿ.ವಿ. ರಾಮನ್‌ರವರ ಮೇಲೆ ಅಗಾಧ ಪ್ರಭಾವ ಬೀರಿದರು. ೧೯೦೭ರಲ್ಲಿ “ಲೋಕ ಸುಂದರಿ” ಎಂಬುವರೊAದಿಗೆ ವಿವಾಹವಾಯಿತು. ಸರ್. ಸಿ.ವಿ. ರಾಮನ್ ೧೯೨೪ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆದರು. ೧೯೨೫ರಲ್ಲಿ ರಷ್ಯಾಕ್ಕೆ ಹೋಗಿ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ ಗೌರವಕ್ಕೆ ಪಾತ್ರರಾದರು. ೧೯೨೬ರಲ್ಲಿ “ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್” ಪತ್ರಿಕೆ ಆರಂಭಿಸಿದರು.

ಸರ್ ಸಿ.ವಿ. ರಾಮನ್ ಬೆಳಕಿನ ಚೆಲ್ಲಾಟ ಕುರಿತು ಅಪಾರವಾಗಿ ಸಂಶೋಧನೆ ಮಾಡಿದರು. ಕಡಲ ಬಣ್ಣ ನೀಲಿ ಏಕೆ? ಆಕಾಶದ ನೀಲಿ ಬಣ್ಣಕ್ಕೆ ಕಾರಣವೇನು? ಮೊದಲಾದ ಕುತೂಹಲಕರ ಪ್ರಶ್ನೆಗಳೊಡನೆ ಅಧ್ಯಯನ ನಡೆಸಿದರು. ರಾಮನ್ ಪರಿಣಾಮ ಅಥವಾ `ರಾಮನ್ ಎಫೆಕ್ಟ್’ನ್ನು ಕಂಡು ಹಿಡಿದರು. ಅರವತ್ತು ದ್ರವಗಳಲ್ಲಿ ತಾವು ನೋಡಿದ ಪರಿಣಾಮಗಳ ವಿಶ್ಲೇಷಣೆಗಳನ್ನು ಸಾಧರಪಡಿಸಿದರು. ೧೯೨೮ ಫೆಬ್ರವರಿ ೨೮ ರಂದು ಸರ್. ಸಿ.ವಿ. ರಾಮನ್ ಆವಿಷ್ಕಾರವನ್ನು ಜಗತ್ತಿಗೆ ಘೋಷಿಸಿದರು. ಅಂದು ‘ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯಾ’ ಘೋಷಣೆಯನ್ನು ವಿಶೇಷವಾಗಿ ದಾಖಲಿಸಿತು. ಆ ಮಹತ್ವಪೂರ್ಣ ದಿನದ ಸವಿ ನೆನಪಿಗಾಗಿ ಭಾರತದಲ್ಲಿ ಫೆಬ್ರವರಿ ೨೮ರಂದು ರಾಷ್ಟಿçÃಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ.

ಸರ್. ಸಿ.ವಿ. ರಾಮನ್ ಅವರಿಗೆ ಸ್ವೀಡಿಫ್ ಅಕಾಡೆಮಿ ಆಫ್ ಸೈನ್ಸಸ್‌ನ ನೋಬೆಲ್ ಬಹುಮಾನವನ್ನು ಅರ್ಥಪೂರ್ಣವಾಗಿ ತಂದು ಕೊಟ್ಟಿದ್ದು ಅವರದ್ದೇ ಆದ ರಾಮನ್ ಪರಿಣಾಮ ಕುರಿತ ಸಂಶೋಧನೆ. ಭಾರತ ಸರಕಾರ ಭಾರತ ರತ್ನ ಬಿರುದನ್ನಿತ್ತು ಗೌರವಿಸಿತು. ಬೆಂಗಳೂರಿನಲ್ಲಿರುವ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅವರೇ ಸ್ಥಾಪಿಸಿದ ಸಂಶೋಧನಾ ಕೇಂದ್ರವಾಗಿದೆ. ಸರ್ ಸಿ.ವಿ. ರಾಮನ್‌ರವರು ೧೯೭೦ನೇ ನವೆಂಬರ್ ೨೧ರಂದು ದೈವಾಧೀನರಾದರು.

ಜನತೆಯಲ್ಲಿರಬಹುದಾದ ಮೌಢ್ಯತೆ, ಅಂಧಕಾರ, ಮೂಢನಂಬಿಕೆಗಳನ್ನು ದೂರ ಮಾಡಿ, ವೈಜ್ಞಾನಿಕ ಮನೋಭಾವವನ್ನು ಭಿತ್ತಿ ಬೆಳೆಸಬೇಕಾಗಿದೆ. ನಾವೆಲ್ಲಾ ವಿಜ್ಞಾನದ ಒಳಿತನ್ನೇ ಅನುಭವಿಸೋಣ.

- ಹರೀಶ್ ಸರಳಾಯ, ಮಡಿಕೇರಿ