ಸಿದ್ದಾಪುರ, ಫೆ. ೨೫: ಸಿದ್ದಾಪುರ ಗ್ರಾ.ಪಂ. ನೂತನ ಆಡಳಿತ ಮಂಡಳಿಯ ಸಭೆ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲೆಯಲ್ಲಿ ಅತಿದೊಡ್ಡ ಹಾಗೂ ೨೫ ಸದಸ್ಯರುಗಳನ್ನು ಒಳಗೊಂಡ ಗ್ರಾ.ಪಂ. ಆಗಿರುವ ಸಿದ್ದಾಪುರ ಗ್ರಾ.ಪಂ. ಮೊದಲ ಸಾಮಾನ್ಯ ಸಭೆಯು ನಡೆಯಿತು.

ಸಭೆಯ ಪ್ರಾರಂಭದಲ್ಲಿ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಪರಸ್ಪರ ಪರಿಚಯ ಮಾಡಿಕೊಂಡರು. ನಂತರ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹಾಜರಿದ್ದರು.