ಮಡಿಕೇರಿ, ಫೆ. ೨೫: ಕೊಡ್ಲಿಪೇಟೆಯಲ್ಲಿ ನಡೆದ ಪದವಿಪೂರ್ವ ಕಾಲೇಜಿನ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಬಾಲಕರ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಕುಶಾಲನಗರದ ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದುಶ್ಯಂತ್, ರೋಹನ್ ಗಣಪತಿ ಹಾಗೂ ಶೈಲೇಶ್ ಮೂರು ವಿದ್ಯಾರ್ಥಿಗಳು ಮಾರ್ಚ್ ೨ ರಂದು ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.