ವೀರಾಜಪೇಟೆ, ಫೆ. ೨೫: ವೀರಾಜಪೇಟೆಯ ದೊಡ್ಡಟ್ಟಿ ಚೌಕಿ ಬಳಿಯ ಚರ್ಚ್ ರಸ್ತೆಯ ಮಸೀದಿ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ಶುದ್ಧ ನೀರಿನ ಘಟಕವನ್ನು ತಾಂತ್ರಿಕ ತಜ್ಞರ ಸಲಹೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳ ಕೆಲವರ ಅಭಿಪ್ರಾಯದಂತೆ ಬೇರೆಡೆಯ ಸೂಕ್ತ ಜಾಗಕ್ಕೆ ಸ್ಥಳಾಂತರಿಸುವುದು, ನಲ್ಲಿ ನೀರು ಪೊರೈಕೆಯ ದರವನ್ನು ಈ ಹಿಂದೆ ನಿಗದಿಪಡಿಸಿದ್ದ ಮಾಸಿಕ ಶುಲ್ಕವನ್ನು ರೂ. ೧೪೨ ರಿಂದ ರೂ. ೧೧೦ಕ್ಕೆ ಇಳಿಕೆ ಮಾಡುವುದು. ಪಟ್ಟಣದಲ್ಲಿ ಶುಚಿತ್ವ, ಬೀದಿ ದೀಪಗಳ ದುರಸ್ತಿ, ನಿರ್ವಹಣೆ, ನಲ್ಲಿ ನೀರಿನ ಪೊರೈಕೆ ಹಾಗೂ ಎಲ್ಲ ವಾರ್ಡ್ಗಳಲ್ಲಿ ಅಗತ್ಯ ಜನಪರ ಕಾಮಗಾರಿಗಳಿಗೆ ಆದ್ಯತೆ ನೀಡಲು ಸಭೆ ತೀರ್ಮಾನಿಸಿತು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸಭೆಯು ಇಂದು ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿಯೇ ದೊಡ್ಡಟ್ಟಿ ಚೌಕಿಯ ಚರ್ಚ್ ರಸ್ತೆಯಲ್ಲಿ ಚರಂಡಿ ಮೇಲೆ ನಿರ್ಮಾಣದ ಹಂತದಲ್ಲಿರುವ ಶುದ್ಧ ನೀರಿನ ಘಟಕಕ್ಕೆ ಕೆಲ ಸದಸ್ಯರ ನಡುವೆÀ ಪರ ವಿರೋಧ ವ್ಯಕ್ತವಾಯಿತು. ಕೊನೆಗೆ ಅಭಿಯಂತರ ಎನ್.ಪಿ. ಹೇಮ್‌ಕುಮಾರ್ ಅವರ ತಾಂತ್ರಿಕ ವರದಿ ನೀಡಿದ ನಂತರ ಇದರ ಸ್ಥಳಾಂತರಕ್ಕೆ ತೀರ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿಯ ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯ ಆದಾಯ ವೆಚ್ಚದಂತೆ ಕೇವಲ ಕಸ ವಿಲೇವಾರಿ ವಾಹನಗಳಿಗೆ ಮಾತ್ರ ಪ್ರತಿ ದಿನ ರೂ. ೨೦೦೦ದಂತೆ ಹತ್ತು ದಿನಕ್ಕೆ ರೂ. ೨೦,೦೦೦ ಹಣ ಡೀಸೆಲ್‌ಗೆ ವ್ಯಯಮಾಡಲಾಗುತ್ತಿದೆ. ಇದರಿಂದ ಡೀಸೆಲ್ ದುಂದು ವೆಚ್ಚಕ್ಕೂ ಕಾರಣವಾಗುತ್ತಿದೆ. ಇದರ ಸಂಬAಧ ತನಿಖೆಯಾಗಿ ಮುಂದಿನ ಸಭೆಗೆ ವರದಿ ನೀಡುವಂತೆ ಸಭೆ ಮುಂದೆ ಹೇಳಿದರು