ವೀರಾಜಪೇಟೆ, ಫೆ. ೨೪: ವೀರಾಜಪೇಟೆ ಬಳಿಯ ದೇವಣಗೇರಿ ಗ್ರಾಮದ ಸ.ನಂ. ೨೭೧/೪ ಹಾಗೂ ೨೭೧/೧ರ ಮಧ್ಯೆ ಹಾದು ಹೋಗಿರುವ ಸಾರ್ವಜನಿಕ ಬಂಡಿದಾರಿ ಪೈಸಾರಿಗೆ ಸೇರಿದ ಜಾಗವನ್ನು ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಕಂದಾಯ ಅಧಿಕಾರಿಗಳ ಸಹಾಯ ದಿಂದ ಜೆ.ಸಿ.ಬಿ.ಯಂತ್ರ ಬಳಸಿ ತೆರವುಗೊಳಿಸಿದ್ದಾರೆ.

ದೇವಣಗೇರಿ ಗ್ರಾಮದ ಎಂ.ಸಿ. ಮುತ್ತಣ್ಣ ಅವರು ತಾಲೂಕು ತಹಶೀಲ್ದಾರ್ ಅವರಿಗೆ ದೂರು ನೀಡಿ ದೇವಣಗೇರಿ ಗ್ರಾಮದ ಎಸ್. ಸುರೇಶ್ ಹಾಗೂ ಮಂದಪ್ಪ ಅವರು ಪೈಸಾರಿ ಜಾಗದಲ್ಲಿರುವ ಬಂಡಿದಾರಿಯ ಸುಮಾರು ೧೦ ಸೆಂಟು ಜಾಗವನ್ನು ಒತ್ತುವರಿ ಮಾಡಿ ಕೊಂಡು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ ಮೇರೆ ಕಂದಾಯ ಪರೀವೀಕ್ಷಕರು ಜಾಗದ ಸರ್ವೇ ಮಾಡಿ ಸಮೀಕ್ಷೆ ನಡೆಸಿದ ನಂತರ ನಕಾಶೆಯಲ್ಲಿ ಜಾಗ ಒತ್ತುವರಿ ಕಂಡುಬAದ ಹಿನ್ನೆಲೆಯಲ್ಲಿ ಬಂಡಿದಾರಿ ಜಾಗಕ್ಕೆ ಗುರುತಿಸಲಾದ ಜಾಗವನ್ನು ಅತಿಕ್ರಮಿಸಿ ಕಾಂಪೌAಡ್ ಕಟ್ಟಿದನ್ನು ಕೆಡವಲಾಗಿದೆ. ಜಾಗಕ್ಕೆ ಹಾಕಿದ ಬೇಲಿಯನ್ನು ತೆಗೆದು ಅತಿಕ್ರಮಣ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಯೋಗಾನಂದ ಅವರು ತಿಳಿಸಿದ್ದಾರೆ.

(ಮೊದಲ ಪುಟದಿಂದ)

ತೆರವಿಗೆ ಸೂಕ್ತ ಕ್ರಮ

ವೀರಾಜಪೇಟೆ ತಾಲೂಕಿ ನಾದ್ಯಂತ ಪೈಸಾರಿ ಜಾಗವನ್ನು ಅತಿಕ್ರಮಿಸಿದವರನ್ನು ತೆರವು ಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅತಿಕ್ರಮಣ ತೆರವು ಕಾರ್ಯ ಮುಂದುವರೆ ಯಲಿದ್ದು ಪೈಸಾರಿ ಜಾಗದ ಸಮೀಕ್ಷೆ ಹಾಗೂ ಸರ್ವೇ ಮುಂದುವರೆ ಯಲಿದೆ ಎಂದು ತಹಶೀಲ್ದಾರ್ ಯೋಗಾನಂದ ತಿಳಿಸಿದ್ದಾರೆ.