ಭಾಗಮಂಡಲ, ಫೆ. ೨೪: ಕಾರುಗುಂದ ಸಮೀಪದ ಕಡಿಯತ್ತೂರು ಗ್ರಾಮದ ಕಡಿಯತ್ತೂರು ಉತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿAದ ಜರುಗಿತು. ಪೋರೆನ ಐನ್‌ಮನೆಯಿಂದ ಭಂಡಾರ ತರುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಊರ ಅಂಬಲದಲ್ಲಿ ಎತ್ತು ಪೋರಾಟ ನಡೆದು ಬಳಿಕ ಸಮೀಪದ ಈಶ್ವರ ದೇವಾಲಯ ದಿಂದ ಶಾಸ್ತಾವು ತೆರೆ ಹೊರಟು ಊರ ಅಂಬಲಕ್ಕೆ ಬರಲಾಯಿತು. ಈ ಸಂದರ್ಭ ಅಯ್ಯಪ್ಪ ತೆರೆ, ಭಗವತಿ ತೆರೆ ನಡೆದು ರಾತ್ರಿ ವೇಳೆ ತೋತ, ಕಾಲಭೈರವ, ಅಜ್ಜಪ್ಪ, ಪಾಷಾಣ ಮೂರ್ತಿ ಸೇರಿದಂತೆ ವಿವಿಧ ಕೋಲಗಳು ನಡೆದು ಮಧ್ಯಾಹ್ನ ೧೧ ಗಂಟೆಗೆ ಗುಳಿಗ ತೆರೆ ಹಾಗೂ ವಿಷ್ಣುಮೂರ್ತಿ ದೇವರ ಅಗ್ನಿಸ್ಪರ್ಶ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾದರು.