ಮಡಿಕೇರಿ, ಫೆ. ೨೪: ಮುಳಿಯ ಜ್ಯುವೆಲ್ಸ್ ತಾ. ೨೫ರಿಂದ ಮಾರ್ಚ್ ೬ರವರೆಗೆ ವಜ್ರಾಭರಣಗಳ ಉತ್ಸವವನ್ನು ಮಡಿಕೇರಿ ಹಾಗೂ ಗೋಣಿಕೊಪ್ಪಲು ಮಳಿಗೆಗಳಲ್ಲಿ ಆಚರಿಸುತ್ತಿದೆ.
ವಜ್ರದ ವೈಢರ್ಯವನ್ನು ಮತ್ತು ವೈಭವವನ್ನು ತಿಳಿಸುವ ಈ ಉತ್ಸವದಲ್ಲಿ ಗುಜರಾತ್ನ, ಸೂರತ್ನ ದೇಶದಲ್ಲಿಯೇ ಹೆಸರುವಾಸಿಯಾದ ಹರೇ ಕೃಷ್ಣ ಡೈಮಂಡ್ಸ್ನ ‘ಏisಟಿಚಿ’ ಬ್ರಾಂಡನ್ನು ಮುಳಿಯ ಪರಿಚಯಿಸುತ್ತಿದೆ. ಡೈಮಂಡ್ ಆಭರಣದ ಹೆಚ್ಚಿನ ಶ್ರೇಣಿಗಳನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ರೂ. ೩,೦೦೦ ರಿಂದ ೬ ಲಕ್ಷದವರೆಗಿನ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಈ ೧೦ ದಿನಗಳ ಪ್ರದರ್ಶನ ಮತ್ತು ಮಾರಾಟ ಕೈಗೆಟುಕುವ ವೈಭವದ ಹಬ್ಬವಾಗಿ ತೆರೆದುಕೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರುಗಳಾದ ಮುಳಿಯ ಕೇಶವ ಪ್ರಸಾದ್ ಹಾಗೂ ಕೃಷ್ಣ ನಾರಾಯಣ ಮುಳಿಯ ಹೇಳಿದ್ದಾರೆ.