ಶ್ರೀಮಂಗಲ, ಫೆ. ೨೪: ಬೆಂಗಳೂರಿನ ಚೈತನ್ಯ ಇಂಟರ್‌ನ್ಯಾಷನಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಸಾಧಕರಿಗೆ ಕೊಡುವ ಪ್ರಸಕ್ತ ವರ್ಷದ ಲಾಲಾ ಲಜಪತರಾಯ್ ಸದ್ಭಾವನಾ ಪ್ರಶಸ್ತಿಯನ್ನು ದೇಶ ಸೇವೆ ಮತ್ತು ಸಮಾಜ ಸೇವೆಗಾಗಿ ಮೂಲತಃ ಕೊಡಗಿನ ನಿವೃತ್ತ ಸೇನಾ ಎನ್.ಎಸ್.ಜಿ. ಬ್ಲಾಕ್ ಕಮಾಂಡೋ ಡಾ. ಕುಪ್ಪಣಮಾಡ ವಸಂತ್ ಪೂವಯ್ಯ ಅವರಿಗೆ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಮಹಾಲಕ್ಷಿö್ಮಪುರಂನಲ್ಲಿ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸವಿನೆನಪಿಗಾಗಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಸಂತ್ ಪೂವಯ್ಯ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಇವರು ಪೊನ್ನಂಪೇಟೆ ತಾಲೂಕಿನ ಪರಕಟಗೇರಿ ಗ್ರಾಮದ ಕುಪ್ಪಣಮಾಡ ಪೂವಯ್ಯ-ಮುತ್ತಮ್ಮ (ತಾಮನೆ-ಅಣ್ಣೀರ) ಅವರ ಪುತ್ರ.