ಭಾಗಮಂಡಲ, ಫೆ. ೨೨: ಭಾಗಮಂಡಲದ ತ್ರಿವೇಣಿ ಸಂಗಮ ತಟದಲ್ಲಿ ಇಂದು ವಿವಿಧ ಸಂಘ - ಸಂಸ್ಥೆಗಳ ಸಹಯೋಗದಲ್ಲಿ ನಾಗಸ್ಥಾನ ಪ್ರತಿಷ್ಠಾಪನಾ ಕಾರ್ಯ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನೆರವೇರಿತು.೧೯೯೨ರ ಅಷ್ಟಮಂಗಲ ಪ್ರಶ್ನೆ, ೨೦೦೫ರ ವೀಳ್ಯ ಪ್ರಶ್ನೆಯಲ್ಲಿ ಕಂಡುಬAದAತೆ ಕೊಡವ ಟ್ರಸ್ಟ್ ವತಿಯಿಂದ ಶಾಸಕರುಗಳಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಭಾಗಮಂಡಲ ಗ್ರಾಮ ಪಂಚಾಯಿತಿ, ಭಾಗಮಂಡಲದ ಅರ್ಚಕರಾದ ಉಪಾಧಿ ಮನೆಯವರು, ತಕ್ಕಮುಖ್ಯಸ್ಥರಾದ ಬಳ್ಳಡ್ಕ, ಕೋಡಿ ಕುಟುಂಬ ಪ್ರಮುಖರು, ಭಾಗಮಂಡಲ ಗೌಡ ಸಮಾಜ, ಮಣವಟ್ಟೀರ, ಮಂಡೀರ ಹಾಗೂ ಪಟ್ಟಮಾಡ ಕುಟುಂಬಸ್ಥರು, ಬೆಂಗಳೂರು ಕೊಡವ ಸಮಾಜ, ಬೆಂಗಳೂರಿನ ೩೧ ಕೊಡವ ಕೂಟಗಳು, ಅಖಿಲ ಕೊಡವ ಸಮಾಜ ಯೂತ್ ವಿಂಗ್ ವೀರಾಜಪೇಟೆ, ಅಖಿಲ ಅಮ್ಮ ಕೊಡವ ಸಮಾಜ ಗೋಣಿಕೊಪ್ಪ, ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜ, ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟ, ವೀರಾಜಪೇಟೆ ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟ, ಕೊಡಗು ಗೌಡ ಯುವ ವೇದಿಕೆ, ಪೊನ್ನಂಪೇಟೆ ಕೊಡವ ಸಮಾಜ ಇವುಗಳ ಸಹಯೋಗದಲ್ಲಿ ಮುಜರಾಯಿ ಇಲಾಖೆಯ ಆಗಮ ಶಾಸ್ತçಜ್ಞರ ಸಲಹೆಯಂತೆ ಸುಮಾರು ೩.೫೦ ಲಕ್ಷ ವೆಚ್ಚದಲ್ಲಿ ಇಂದು ನಾಗಸ್ಥಾನ ಮೊದಲ ಪುಟದಿಂದ) ಪ್ರತಿಷ್ಠಾಪನಾ ಕಾರ್ಯವು ನಡೆಯಿತು. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಹೋಮ, ಪ್ರತಿಷ್ಠೆ, ಕಲಶ, ಆಶ್ಲೇಷ ಬಲಿ, ಮಹಾಪೂಜೆ ನೆರವೇರಿತು.

ತ್ರಿವೇಣಿ ಸಂಗಮದ ತಟದಲ್ಲಿ ಇರುವ ನಾಗಸ್ಥಾನ ಮತ್ತು ತಕ್ಷಕವನವನ್ನು ಜೀರ್ಣೋದ್ಧಾರ ಮಾಡಿ ನಾಗಕ್ಷೇತ್ರದಲ್ಲಿ ನಡೆಯುವ (ಮೊದಲ ಪುಟದಿಂದ) ಪ್ರತಿಷ್ಠಾಪನಾ ಕಾರ್ಯವು ನಡೆಯಿತು. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಹೋಮ, ಪ್ರತಿಷ್ಠೆ, ಕಲಶ, ಆಶ್ಲೇಷ ಬಲಿ, ಮಹಾಪೂಜೆ ನೆರವೇರಿತು. ತ್ರಿವೇಣಿ ಸಂಗಮದ ತಟದಲ್ಲಿ ಇರುವ ನಾಗಸ್ಥಾನ ಮತ್ತು ತಕ್ಷಕವನವನ್ನು ಜೀರ್ಣೋದ್ಧಾರ ಮಾಡಿ ನಾಗಕ್ಷೇತ್ರದಲ್ಲಿ ನಡೆಯುವ ಇಂದು ನಡೆದ ಧಾರ್ಮಿಕ ಕಾರ್ಯದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಶಾಸಕಿ ವೀಣಾ ಅಚ್ಚಯ್ಯ, ಕೊಡವ ಟ್ರಸ್ಟ್ ಪ್ರಮುಖರಾದ ತಮ್ಮು ಪೂವಯ್ಯ, ಪ್ರಮೋದ್ ಸೋಮಯ್ಯ, ಪಿ.ಎಂ. ಮುತ್ತಣ್ಣ, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಮಾಜಿ ಸದಸ್ಯರು ಗಳು, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಪಾರುಪತ್ಯೆಗಾರ ಪೊನ್ನಣ್ಣ, ವೀರಾಜಪೇಟೆ ಕೊಡವ ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿ ಗಳಾದ ಬೊಳ್ಳಪಂಡ ಬೋಪಣ್ಣ, ಕಂಡ್ರತAಡ ಪ್ರವೀಣ್, ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಬೆಂಗಳೂರು ಕೊಡವ ಸಮಾಜದ ಕಾರ್ಯದರ್ಶಿ, ದಾನಿ ಚೆರಿಯಪಂಡ ಸುರೇಶ್, ಭಾಗಮಂಡಲ ಗೌಡ ಸಮಾಜ ಪ್ರಮುಖರಾದ ಕುದುಪಜೆ ಪ್ರಕಾಶ್, ಕೆದಂಬಾಡಿ ರಮೇಶ್, ಭಗಂಡೇಶ್ವರ ದೇವಾಲಯ ಪ್ರಧಾನ ಅರ್ಚಕ ಹರೀಶ್ ಭಟ್, ಮಣವಟ್ಟಿರ ದೊರೆ ಸೋಮಣ್ಣ ಸೇರಿದಂತೆ ನಾಗಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ಕೆ ಸಹಕಾರ ನೀಡಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

-ವರದಿ: ಸುಧೀರ್, ಚಿತ್ರ : ಸುನಿಲ್.