ಸಿದ್ದಾಪುರ, ಫೆ. ೨೦: ಗಲ್ಫ್ ರಾಷ್ಟçದಲ್ಲಿ ಉದ್ಯೊಗದಲ್ಲಿದ್ದು ಊರಿಗೆ ಹಿಂತಿರುಗಿದ ನಂತರ ಹೃದಯಾಘಾತದಿಂದ ನಿಧನರಾದ ಗರಗಂದೂರಿನ ಹನೀಫ್ ಅವರ ಅಕಾಲಿಕ ಮರಣದಿಂದ ಕುಟುಂಬ ಸಂಕಷ್ಟದಲ್ಲಿತ್ತು.
ವಾಸಿಸಲು ಮನೆ ಇಲ್ಲದೇ ಕಂಗಾಲಾಗಿದ್ದ ಕುಟುಂಬಕ್ಕೆ ಧೈರ್ಯ ತುಂಬುವ ಮೂಲಕ ಮಾಲ್ದಾರೆಯಲ್ಲಿ ಅಂದಾಜು ರೂ. ೭ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯೊಂದನ್ನು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ (ಜಿ.ಸಿ.ಸಿ. ಗಲ್ಫ್) ಸಮಿತಿ ನಿರ್ಮಿಸಿಕೊಟ್ಟಿದ್ದು, ಕೊಡಗು ಜಿಲ್ಲಾ ಉಪ ಖಾಝಿ ಮಹಮೂದ್ ಉಸ್ತಾದ್ ಎಡಪ್ಪಾಲಂ ಸಂತ್ರಸ್ತ ಕುಟುಂಬಕ್ಕೆ ದಾರುಲ್ ಖೈರ್ ಮನೆಯ ಕೀಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಪ್ರಮುಖರಾದ ಸೈಯದ್ ಮಹದಿ ತಂಙಳ್ ಲಕ್ಷದೀಪ್, ಸೈಯದ್ ಅಬ್ದುಲ್ ಖಾದರ್ ಅಲ್ ಬುಖಾರಿ, ಅಶ್ರಫ್ ಅಹ್ಸನಿ, ಅಲಿ ಮುಸ್ಲಿಯಾರ್, ಹಫೀಳ್ ಸಅದಿ ಕೊಳಕೇರಿ, ಇಸ್ಮಾಯಿಲ್ ಸಖಾಫಿ, ಅಬ್ದುಲ್ಲಾ ಸಖಾಫಿ, ಶಾಫಿ ಸಹದಿ ಸೇರಿದಂತೆ ಮತ್ತಿತರರು ಇದ್ದರು.