ಮಡಿಕೇರಿ ಫೆ. ೨೦: ಹುಣಸೂರಿನಲ್ಲಿ ನಡೆದ ಓಪನ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ ತಂಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದೆ.
ಸೊಲೋ ವಿಭಾಗದಲ್ಲಿ ವಿದ್ಯಾರ್ಥಿ ತೇಜಸ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿದ್ದ ತಂಡದ ಕಾವೇರಮ್ಮ, ಬೋಜಮ್ಮ, ತೇಜಸ್, ಕೀರ್ತನ್, ಸೋನಲ್, ಅದಿಥಿ, ಆರ್ಯ, ಗ್ರೀಷ್ಮ, ಆರ್ಯನ್, ಶಿವಕುಮಾರ್, ಯಾನಶೆಟ್ಟಿ, ಪ್ರಜ್ಞಾ, ಮೌಲ್ಯ, ಸನಿತ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೃತ್ಯ ತರಬೇತಿದಾರರಾಗಿ ಅಭಿಷೇಕ್ ಕಾರ್ಯನಿರ್ವಹಿಸಿದರು.