ಕುಶಾಲನಗರ, ಫೆ. ೨೦: ತೈಲ ಬೆಲೆ ಏರಿಕೆ ವಿರೋಧಿಸಿ ಕೂರ್ಗ್ ಬೊರ್ವೆಲ್ ಅಸೋಸಿಯೇಷನ್ ವತಿಯಿಂದ ಕುಶಾಲನಗರ ಸಮೀಪ ಕೊಪ್ಪ ಬಳಿ ಪ್ರತಿಭಟನೆ ನಡೆಯಿತು.
ಅಸೋಸಿಯೇಷನ್ ಅಧ್ಯಕ್ಷ ನಿರಂಜನ್ ನೇತೃತ್ವದಲ್ಲಿ ಲಾರಿ ಚಾಲಕರು, ಮಾಲೀಕರು, ಕಾರ್ಮಿಕರು ಕೊಪ್ಪ-ಬೆಟ್ಟದಪುರ ವೃತ್ತದಲ್ಲಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಅಸೋಸಿ ಯೇಷನ್ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಂಜು, ಪ್ರಮುಖ ರಾದ ಸಂತೋಷ್, ಮರಡಿಯೂರು ಸಂತೋಷ, ಸ್ವಾಮಿನಾಥನ್, ದೀಪಕ್, ಮಡಿಕೇರಿ ಮಂಜೇಶ್, ಚೆಟ್ಟಳ್ಳಿ ಪ್ರವೀಣ್, ಅನಿಲ್ ಇದ್ದರು.