ಭಾಗಮAಡಲ, ಫೆ. ೨೦: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಜನರ ಆಶೋತ್ತರಗಳಿಗೆ ಸ್ಪಂದಿಸ ಬೇಕಾಗಿರುವುದು ಚುನಾಯಿತ ಜನಪ್ರತಿನಿಧಿಗಳ ಕರ್ತವ್ಯ ಎಂದು ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಜೆ. ಸತೀಶ್‌ಕುಮಾರ್ ಹೇಳಿದರು. ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ಗೆಲುವು ಸಾಧಿಸಿದ ಗ್ರಾ.ಪಂ. ಸದಸ್ಯರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಮೂರು ಪಕ್ಷಗಳ ಅಭ್ಯರ್ಥಿಗಳ ತ್ರಿಕೋನ ಸ್ಪರ್ಧೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ದಂಡಿನ ಜಯಂತ್ ಜೊತೆಗೆ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಮಹಿಳಾ ಅಭ್ಯರ್ಥಿ ಗಂಗಮ್ಮ ಅವರನ್ನು ಗೆಲ್ಲಿಸಿರುವುದು ಮಹತ್ವದ ಸಾಧನೆ ಎಂದರು.
ಸಾಮಾನ್ಯ ಜನರ ಪ್ರೀತಿ ವಿಶ್ವಾಸ ಗಳಿಸಿ ಅವರನ್ನು ನೆನಪಿಸಿಕೊಂಡರೆ ಮಾತ್ರ ಅದೇ ದೊಡ್ಡ ಆಶೀರ್ವಾದ ಎಂದರು. ಈ ಸಂದರ್ಭ ತಣ್ಣಿಮಾನಿ ಗ್ರಾಮದಿಂದ ಗೆಲುವು ಸಾಧಿಸಿದ ದಂಡಿನ ಜಯಂತ್ ಹಾಗೂ ಗಂಗಮ್ಮ ಇವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜೂ ಕುಯ್ಯಮುಡಿ ಇವರನ್ನು ಗ್ರಾಮದ ಹಿರಿಯರು ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಕುದುಕುಳಿ ಕೃಷ್ಣಪ್ಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ದುರ್ಗಾವತಿ. ಸುನಿತ, ಸಿರಕಜೆ ನಾಗೇಶ್, ಕರಿಕೆಯ ಕೆ.ಎ. ನಾರಾಯಣ, ಗೌಡ ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ, ವಕೀಲ ಸುನಿಲ್ ಪತ್ರಾವೊ, ಕುದುಪಜೆ ದಾಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಅಮೆ ನಿತ್ಯಾನಂದ, ದಂಡಿನ ಆನಂದ, ಬೈತಡ್ಕ ದೇವಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.