*ಗೋಣಿಕೊಪ್ಪಲು, ಫೆ. ೨೦: ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗೋರಕ್ಷಕರು ಕಬ್ಬಿಣ ತುಂಡಿನಿAದ ಹಲ್ಲೆ ನಡೆಸಿದ ಘಟನೆ ಕುಟ್ಟ ಗ್ರಾಮದಲ್ಲಿ ನಡೆದಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಟ್ಟ, ಬಾಡಗ ನಾಣಚ್ಚಿ ಗ್ರಾಮದ ನಿವಾಸಿ ಮಜೀûದ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ವೀರಾಜಪೇಟೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಕುಂದ ಎಸ್ಟೇಟಿನ ಮಾಲೀಕ ಡಾ. ಕೊಡಂದೇರ ಸಿ. ಮಾದಪ್ಪ ಅವರಲ್ಲಿಂದ ಸಾಕಲು ೬ ಎಮ್ಮೆಗಳನ್ನು ಪಿಕ್‌ಅಪ್ ವಾಹನದಲ್ಲಿ ರಾತ್ರಿ ೧೦ ಗಂಟೆಗೆ ತುಂಬಿ ಮನೆಗೆ ಸಾಗಾಟ ಮಾಡಲಾಗುತಿತ್ತು. ಸಮಯದ ಅಭಾವದಿಂದ ಮಾಲೀಕರ ಅನುಮತಿ ಪತ್ರದೊಂದಿಗೆ ರಾತ್ರಿ ಸಮಯದಲ್ಲಿ ಎಮ್ಮೆಗಳನ್ನು ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು.

ಈ ಸಂದರ್ಭ ತಿರುವಿನ ಕೇಂಬು ಕೊಲ್ಲಿ ಎಂಬ ಸ್ಥಳದಲ್ಲಿ ಗೋರಕ್ಷಕರು ದಿಢೀರನೆ ಪಿಕ್‌ಅಪ್ ವಾಹನವನ್ನು ತಡೆದು ಕತ್ತಿ ಹಿಡಿದು ಹಲ್ಲೆ ನಡೆಸಲು ಮುಂದಾದರು. ಗಾಬರಿಯಿಂದ ತಪ್ಪಿಸಿಕೊಂಡು ಓಡುವಾಗ ಕಬ್ಬಿಣದ ತುಂಡನ್ನು ಎಸೆದ ಪರಿಣಾಮ ಹಣೆಯ ಭಾಗಕ್ಕೆ ಮತ್ತು ಕೈಗಳಿಗೆ ಪೆಟ್ಟಾಗಿದೆ. ಅಲ್ಲದೆ ಕಾಫಿ ವ್ಯಾಪಾರ ನಡೆಸಿ ವಾಹನದಲ್ಲಿಟ್ಟಿದ್ದ ೧ ಲಕ್ಷದ ೧೫ ಸಾವಿರ ರೂಪಾಯಿ ಹಣ ಕಾಣೆಯಾಗಿದೆ ಎಂದು ಮಜಿûÃದ್ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಜಾಯ್, ಶ್ರೀಕಾಂತ್, ರೋಷನ್, ಸುನೀಶ್ ಅವರ ಮೇಲೆ ದೂರು ದಾಖಲಿಸಿದ್ದಾರೆ.