ಶ್ರೀಮಂಗಲ, ಫೆ. ೨೦: ಕುಮಟೂರು ಗ್ರಾಮದಲ್ಲಿ ರೈತÀ ಮತ್ರಂಡ ರಘುರವರ ಹಸುವಿನ ಮೇಲೆ ಹುಲಿ ಎರಗಿ ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದು, ಹಸುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಶನಿವಾರ ಮುಂಜಾನೆ ಹುಲಿ ದಾಳಿ ಮಾಡಿದ ಸಂದರ್ಭ ಹಸು ಹಗ್ಗವನ್ನು ತುಂಡರಿಸಿಕೊAಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಈ ಸಂದರ್ಭ ಗದ್ದೆಯಲ್ಲಿ ಕೆಸರಿನಲ್ಲಿ ಹಸು ಹೂತುಕೊಂಡ ಹಿನ್ನೆಲೆ ಹುಲಿ ಹಸುವಿನ ಕತ್ತಿನ ಭಾಗಕ್ಕೆ ಗಂಭೀರ ಗಾಯಗೊಳಿಸಿದೆ.

ಹುಲಿ ದಾಳಿಯ ಬಗ್ಗೆ ಶನಿವಾರ ಶ್ರೀಮಂಗಲದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಗ್ರಾಮ ವಾಸ್ತವ್ಯದ ಸಭೆಯಲ್ಲಿ ಪ್ರಸ್ತಾಪವಾಯಿತು. ಗ್ರಾ.ಪಂ. ಸದಸ್ಯ ಮಾದೀರ ಸುದಿಪೊನ್ನಪ್ಪ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ಹುಲಿ ದಾಳಿಯಿಂದ ಸಾವಿಗೀಡಾಗುವ ಹಸುವಿಗೆ ಕೇವಲ ಅರಣ್ಯ ಇಲಾಖೆ ೧೦ ಸಾವಿರ ರೂ. ಪರಿಹಾರ ನೀಡುತ್ತಿದೆ. ಹಸುಗಳಿಗೆ ೫೦ ರಿಂದ ೬೦ ಸಾವಿರ ಮೌಲ್ಯವಿದೆ. ಹಸುವಿನ ಮೌಲ್ಯವನ್ನು ಪರಿಹಾರವಾಗಿ ನೀಡಬೇಕು. ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು. ಹುಲಿಯೊಂದಿಗೆ ಕಾಡುಕೋಣ, ಕಾಡುಹಂದಿ, ಕಾಡಾನೆಗಳ ಹಾವಳಿಯಿಂದ ಇಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಶ್ರೀಮಂಗಲ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಹುಲಿಯಿಂದ ಹಸುಗಳ ರಕ್ಷಣೆಗೆ ಅರಣ್ಯ ಇಲಾಖೆ ಸುರಕ್ಷಿತ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯ ಧನ ನೀಡುವ ಯೋಜನೆ ಇದೆ. ಆದರೆ, ಇದುವರೆಗೆ ಈ ವ್ಯಾಪ್ತಿಯಲ್ಲಿ ಯಾವುದೇ ರೈತರಿಗೆ ಇದರ ಸೌಲಭ್ಯ ದೊರೆತಿಲ್ಲ. ಕೂಡಲೇ ಈ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿದರು.

ರೈತ ಸಂಘದ ಮುಖಂಡ ಅಪ್ಪಚಂಗಡ ಮೋಟಯ್ಯ ಅವರು ಈ ವಿಚಾರದ ಬಗ್ಗೆ ಪ್ರಸ್ತಾಪಿಸಿ ಅರಣ್ಯ ಇಲಾಖೆಯಿಂದ ನೀಡುವ ಪರಿಹಾರದ ಬಗ್ಗೆ ಬಾಳೆಲೆಯಲ್ಲಿ ಸಿಸಿಎಫ್ ಹೀರಲಾಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಹೆಚ್ಚಿನ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದ್ದರು. ಈ ಸಭೆಯಾಗಿ ೧ ವರ್ಷವಾದರೂ ಪರಿಹಾರ ಪ್ರಮಾಣ ಹೆಚ್ಚಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಿತಿಮತಿ ಎಸಿಎಫ್ ಪಂದ್ಯAಡ ಉತ್ತಪ್ಪ ಅವರು ಹುಲಿ ಸೆರೆಗೆ ಈಗಾಗಲೇ ಅನುಮತಿ ಕೋರಿದ್ದೇವೆ. ಸಿಕ್ಕಿದ ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಅವರು ಪರಿಹಾರ ಪ್ರಮಾಣ ಹೆಚ್ಚು ಮಾಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.