ಮಡಿಕೇರಿ, ಫೆ. ೧೯: ವಾಕ್ ಮತ್ತು ಶ್ರವಣ ಚಿಕಿತ್ಸೆಗೆ ಸಂಬAಧಿಸಿದAತೆ ಜಿಲ್ಲೆಯ ಯುವತಿಯೋರ್ವಳು ಉತ್ತಮ ಸಾಧನೆ ತೋರಿದ್ದಾಳೆ. ಬೆಂಗಳೂರಿನ ಚಂದ್ರಶೇಖರ್ ಇನ್ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿರುವ ಮಡಿಕೇರಿಯ ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ರತ್ನ (ತಾಮನೆ - ಕೊಕ್ಕಲೆಮಾಡ) ದಂಪತಿಯ ಪುತ್ರಿ ದಶಮಿಪೂಣಚ್ಚ ಈ ಅಧ್ಯಯನದಲ್ಲಿ ಸಂಸ್ಥೆಗೆ ಪ್ರಥಮ ರ‍್ಯಾಂಕ್‌ನ ಸಾಧನೆ ಮಾಡಿದ್ದಾಳೆ. ಇದರೊಂದಿಗೆ ದಶಮಿ ಬೆಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲೂ ಉನ್ನತ ಸ್ಥಾನ ಪಡೆದಿದ್ದು, ಇದು ಇನ್ನಷ್ಟೆ ಪ್ರಕಟವಾಗಬೇಕಿದೆ. ಇತ್ತೀಚೆಗೆ ಸಂಸ್ಥೆಯ ಮೂಲಕ ಇವರನ್ನು ಸನ್ಮಾನಿಸಲಾಯಿತು.