ಪೊನ್ನಂಪೇಟೆ. ಫೆ. ೧೮: ತಾ. ೧೬ ರಂದು ರಾತ್ರಿ ಬಲ್ಯಮಂಡೂರು ಗ್ರಾಮದ ಕೊಟ್ಟಂಗಡ ವಿಶು ಬೋಪಣ್ಣ ಎಂಬುವವರ ಕರುವನ್ನು ಹುಲಿ ಕೊಟ್ಟಿಗೆಗೆ ನುಗ್ಗಿ ಕೊಂದು ಹಾಕಿ, ಕರುವಿನ ಕಳೇಬರವನ್ನು ಕೊಟ್ಟಿಗೆಯಿಂದ ದೂರ ಎಳೆದೊಯ್ದು ಸ್ವಲ್ಪ ಭಾಗ ಮಾತ್ರ ತಿಂದು ಹೋಗಿದ್ದರಿಂದ, ಹುಲಿ ಮತ್ತೆ ಬರಬಹುದು ಎಂದು ಅಂದಾಜಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕರುವಿನ ಕಳೇಬರ ಇದ್ದ ಜಾಗದಲ್ಲಿ ಕ್ಯಾಮರ ಅಳವಡಿಸಿದ್ದರು.

ಕಳೆದ ರಾತ್ರಿ ಮತ್ತೆ ಕರುವನ್ನು ಬಿಟ್ಟು ಹೋಗಿದ್ದ ಜಾಗಕ್ಕೆ ಬಂದ ಹುಲಿರಾಯ ಕರುವನ್ನು ಎಳೆದು ಕೊಂಡು ಹೋಗುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸುತ್ತಮುತ್ತ ಹುಡುಕಾಡಿದರು ಕೂಡ ಕರುವಿನ ಕಳೇಬರ ಕಂಡು ಬಂದಿಲ್ಲ.

ಇದರಿAದ ಆತಂಕಗೊAಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆದಷ್ಟು ಬೇಗ ಹುಲಿಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಸಂದÀರ್ಭ ಗ್ರಾ.ಪಂ. ಸದಸ್ಯ ಕೊಟ್ಟಂಗಡ ಅಯ್ಯಪ್ಪ, ಗ್ರಾಮಸ್ಥರಾದ ಪ್ರಕಾಶ್, ಬೋಪಣ್ಣ, ಅರಣ್ಯ ಇಲಾಖೆಯ ಸಿಬ್ಬಂದಿ, ಇನ್ನಿತರರು ಇದ್ದರು.