ವೀರಾಜಪೇಟೆ, ಫೆ. ೧೯: ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಪಿ.ಬಿ. ಬೋಜು ಹಾಗೂ ಉಪಾಧ್ಯಕ್ಷರಾಗಿ ಎಂ. ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಸಚಿನ್ ಕಾರ್ಯನಿರ್ವಹಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಶಶಿ ಸುಬ್ರಮಣಿ, ಪಂಚಾಯಿತಿಗೆ ಆಯ್ಕೆಯಾದ ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ತಾಲೂಕು ಬಿಜೆಪಿ ಕಾರ್ಯದರ್ಶಿ ವಿ. ಬೋಪಣ್ಣ, ಚೆಂಬೆಬೆಳ್ಳೂರು ಬಿಜೆಪಿ ಅಧ್ಯಕ್ಷ ಚಾರಿಮಂಡ ಬೋಪಣ್ಣ, ನೂತನ ಸದಸ್ಯರುಗಳಾದ ಮಂಡೆಪAಡ ಚಿಟ್ಟಿಯಪ್ಪ, ಚಾರಿಮಂಡ ವೀಣಾ, ಪುಗ್ಗೆರ ಶಾಂತಿ, ಮೇಕತಂಡ ಸುಬ್ಬಯ್ಯ, ವಿ. ಡಾಲು, ವಾಸು ಟಿ.ಡಿ., ಹೆಚ್.ಜಿ. ಕಿರಣ್, ಸುಮತಿ, ಜಾನಕಿ, ಲಲಿತ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.