ಕೂಡಿಗೆ, ಫೆ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಸೋಮವಾರ ಪೇಟೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಆಗಿನ ಶಾಸಕರು ಭೂಮಿಪೂಜೆ ಕೂಡಿಗೆ, ಫೆ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಸೋಮವಾರ ಪೇಟೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಆಗಿನ ಶಾಸಕರು ಭೂಮಿಪೂಜೆ ಕೂಡಿಗೆ, ಫೆ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಸೋಮವಾರ ಪೇಟೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಆಗಿನ ಶಾಸಕರು ಭೂಮಿಪೂಜೆ ಇಲಾಖೆಗೆ ಅಲ್ಲಿನ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದರು. ಅದರಂತೆ ಇಲಾಖೆಯ ವತಿಯಿಂದ ರೂ. ೨೦ ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲು ನೀಲಿ ನಕ್ಷೆ ತಯಾರಿಸಿ ನಂತರ ಹಣ ಬಿಡುಗಡೆ ಆದ ನಂತರ ಕಾಮಗಾರಿಯನ್ನು ಪ್ರಾರಂಭ ಮಾಡಲಾಯಿತು.

ಕಾಮಗಾರಿಯು ಪ್ರಾರಂಭವಾಗಿ ಒಂದು ಹಂತ ತಲುಪವಷ್ಟರಲ್ಲಿ ಪಕ್ಕದ ಜಮೀನಿನವರು ನ್ಯಾಯಾಲಯದ ಮೊರೆಹೋದರು. ಆದರೆ ಕಂದಾಯ ಇಲಾಖೆಯ ಪ್ರಕಾರ ಕಟ್ಟಡದ ಜಾಗವು ಪೈಸಾರಿಯಾಗಿದ್ದು, ಸರಕಾರದ ಪ್ರಗತಿಪರ ಕೆಲಸಗಳ ಉಪಯೋಗಕ್ಕೆ ಬಳಸಬಹುದಾದರೂ ಇದುವರೆಗೂ ಆರೋಗ್ಯ ಇಲಾಖೆ, ತಾಲೂಕು ಮಟ್ಟದ ಅಧಿಕಾರಿಗಳಾಗಲ್ಲಿ ಅಥವಾ ಹೆಬ್ಬಾಲೆ ವಿಭಾಗದ ಅಧಿಕಾರಿಗಳಾಗಲಿ ಯಾವುದೇ ಪ್ರಯತ್ನ ಮಾಡದ ಕಾರಣ ೧೫ ವರ್ಷಗಳಿಂದಲೂ ಮೂಲೆ ಗುಂಪಾಗಿ ಕಟ್ಟಡದ ಮೇಲೆಯೂ ಕಾಡು ಬೆಳೆದು ನಿಂತಿದೆ.

ಮದಲಾಪುರ ಗ್ರಾಮದಲ್ಲಿ ತೆರೆಯಲು ಉದ್ದೇಶಿಸಿರುವ ಈ ಕೇಂದ್ರಕ್ಕೆ ಹತ್ತು ಗ್ರಾಮಗಳ ಜೊತೆಯಲ್ಲಿ ಈ ಗ್ರಾಮದ ಸಮೀಪದಲ್ಲಿ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ೩೭೫ ಕುಟುಂಬದವರು ಸಹ ಸೇರಿರುತ್ತಾರೆ. ೧೫ ವರ್ಷಗಳು ಕಳೆದರೂ ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಮುಂದಾಗದಿರುವುದು ವಿಷಾಧನೀಯವಾಗಿದೆ. ಸಂಬAಧಿಸಿದ ಇಲಾಖೆಯವರು ಮತ್ತು ಕ್ಷೇತ್ರದ ಶಾಸಕರು ಇದರ ಬಗ್ಗೆ ಗಮನ ಹರಿಸುವ ಮೂಲಕ ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.