*ಗೋಣಿಕೊಪ್ಪ, ಫೆ. ೧೯: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಿಳು ಶಾಲೆಗೆ ತೆರಳುವ ರಸ್ತೆಗೆ ೩೦ ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಕೊಟ್ಟತಮ್ಮ ದೇವಸ್ಥಾನಕ್ಕೆ ರಸ್ತೆಯ ನಾತಂಗಲ್ ಉಳಿಪಾರೆ ಮಾರ್ಗದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾ.ಪಂ. ಸದಸ್ಯರುಗಳಾದ ತೀತರ ಪ್ರತೀಶ್ ಗಣಪತಿ, ವೈ. ಕಲಾ, ಜನಾರ್ಧನ, ತೀರ್ಥ ಮಂಜುನಾಥ್, ದಿವ್ಯ ಮನೋಜ್, ಹೇಮಾ, ಮೀನ, ಮಣಿಕುಮಾರ್, ಮುಂಡುಮಾಡ ಶಾಂತಿ, ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊಟ್ಟೆಂಗಡ ರಮೇಶ್, ಕುಟ್ಟ ಮಹಾಶಕ್ತಿ ಕೇಂದ್ರ ಅಧ್ಯಕ್ಷ ತೀತಿರ ಮಂಜುನಾಥ್, ಸಹಪ್ರಮುಖ್ ಕಾಕೇರ ದಿನೇಶ್, ತಾಲೂಕು ಕಾರ್ಯಾಲಯ ಕಾರ್ಯದರ್ಶಿ ಚೋಡುಮಾಡ ದಿನೇಶ್, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಕೃಷಿ ಮೋರ್ಚಾ ಅಧ್ಯಕ್ಷ ಮುಂಡುಮಾಡ ಕರುಂಬಯ್ಯ, ಕುಟ್ಟ ಮಹಿಳಾ ಮೋರ್ಚಾ ಅಧ್ಯಕ್ಷ ಚೋಡುಮಾಡ ಗೀತಾ ಪೂಣಚ್ಚ, ಓ.ಬಿ.ಸಿ. ಅಧ್ಯಕ್ಷ ಕಾಕೇರ ಸುರೇಶ್, ಎ.ಎನ್.ಡಿ.ಪಿ. ಅಧ್ಯಕ್ಷ ರವಿ ನಾಂತಗಲ್, ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.