ಮಡಿಕೇರಿ, ಫೆ. ೧೮: ಕೊಡಗು ಜಾನಪದ ಪರಿಷತ್ ಘಟಕ ಮತ್ತು ಆರೋಹಣ ಸಂಘಟನೆಗಳ ಆಶ್ರಯದಲ್ಲಿ ಇತ್ತೀಚೆಗೆ ಕತ್ತಲ ಹಾಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಮೇಕೇರಿ ಬಳಿ, ಬಾಲಕೃಷ್ಣ ನಿವಾಸದ ಪ್ರಶಾಂತ ವಾತಾವರಣದಲ್ಲಿ, ಜೋಡಿಸಿದ ಹಣತೆಗಳ ಬೆಳಕಿನ ನಡುವೆ ಬಂಟ್ವಾಳದ ನಾದ ಮಣಿ ನಾಲ್ಕೂರು ಅವರಿಂದ ಜೀವನದ ವಾಸ್ತವಕ್ಕೆ ಬೆಳಕು ಚೆಲ್ಲುವ ಏಕತಾರೀ ಸಹಿತದ ಹಾಡುಗಳು ಮುದ ನೀಡಿದವು.

ಈ ಸಂದರ್ಭ ನಾದ ಮಣಿ ಅವರನ್ನು ಶಾಲು-ಪೇಟ ನೀಡಿ ಸನ್ಮಾನಿಸಲಾಯಿತು. ಬಾಬು ಸೋಮಯ್ಯ ಅವರನ್ನು ಗೌರವಿಸಲಾಯಿತು. ಬಿ.ಜಿ. ಅನಂತಶಯನ ಸ್ವಾಗತಿಸಿದರು. ಮಹೇಶ್‌ಕುಮಾರ್ ವಂದಿಸಿದರು.