ವೀರಾಜಪೇಟೆ, ಫೆ. ೧೯: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಕರ್ನಾಟಕ ಗೃಹ ರಕ್ಷಕ ದಳದವರಿಗೆ ನಡೆದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ಕೊಡಗಿನ ವೀರಾಜಪೇಟೆ ಘಟಕದ ಮದಭ್ ಬೈರಾಗಿ ತರಬೇತಿ ಪಡೆದು ನಂತರ ನಡೆದ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಇವರನ್ನು ಸನ್ಮಾನಿಸಿ, ಗೌರವಿಸಿದರು. ಮದಭ್ ಬೈರಾಗಿ ಅವರು ವೀರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಸಮರ ಬೈರಾಗಿ ಅವರ ಪುತ್ರರಾಗಿದ್ದಾರೆ. ಹನ್ನೊಂದು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ರಾಜ್ಯದ ಸುಮಾರು ೫೮ ಅಭ್ಯರ್ಥಿಗಳು ಭಾಗವಹಿಸಿದ್ದರು.