ಪೊನ್ನಂಪೇಟೆ. ಫೆ.೧೯: ಜಾನುವಾರುಗಳ ಬೇಟೆಗಾಗಿ ಕಾಡು ಬಿಟ್ಟು ನಾಡಿಗೆ ಬಂದಿರುವ ಹುಲಿರಾಯ ಕಳೆದ ಮೂರು ದಿನಗಳಿಂದಲೂ ಬಲ್ಯಮಂಡೂರಿನ ಬರಂಡೂಡೆ ಎಂಬ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇದಕ್ಕೆ ಪುರಾವೆ ಎಂಬAತೆ ಈ ವ್ಯಾಪಿಯಲ್ಲಿ ಹಲವು ಕಡೆ ಹುಲಿಯ ಹೆಜ್ಜೆಗುರುತುಗಳು ಕಂಡು ಬಂದಿವೆ. ಕಾಫಿ ತೋಟಗಳಿಗೆ ಸ್ಪಿಂಕ್ಲರ್ ಮಾಡಿರುವ ಕಾರಣದಿಂದ ಮಣ್ಣಿನ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಮೂಡಿದೆ. ಈ ಬಗ್ಗೆ ಬಲ್ಯಮಂಡೂರು ಗ್ರಾ. ಪಂ. ಸದಸ್ಯ ಕೊಟ್ಟಂಗಡ ಅಯ್ಯಪ್ಪ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಎಸಿಎಫ್ ಉತ್ತಪ್ಪ ಹಾಗೂ ಡಿ ವೈ ಆರ್ ಎಫ್ ಓ ದಿವಾಕರ್ ತಮ್ಮ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶೀಘ್ರ ಬೇಗ ಹುಲಿಯನ್ನು ಸೆರೆ ಹಿಡಿದು ಆತಂಕ ನಿವಾರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಇಂದಿನಿAದ ಎರಡು ಮೂರು ದಿನ ರಾತ್ರಿ ಕೂಂಬಿAಗ್ ನಡೆಸಲಾಗುವುದು. ಹಾಗೂ ವಿವಿಧೆಡೆ ಕ್ಯಾಮರಾ ಅಳವಡಿಸಲಾಗುವುದು ಎಂದರು. ಈಗಾಗಲೇ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದ್ದು, ಹುಲಿಯನ್ನು ಸೆರೆ ಹಿಡಿಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಗ್ರಾ. ಪಂ. ಸದಸ್ಯ ಕೊಟ್ಟಂಗಡ ಅಯ್ಯಪ್ಪ, ಗ್ರಾಮಸ್ಥರಾದ ಪ್ರಕಾಶ್, ದರ್ಶನ್, ಸದಾಶಿವ, ಸಿದ್ದು, ಮಣಿ, ಬೋಪಣ್ಣ, ಸುರೇಶ್ ಇನ್ನಿತರರು ಇದ್ದರು. - ಚನ್ನನಾಯಕ