ಕೂಡಿಗೆ, ಫೆ. ೧೯: ಗ್ರಾಮಾಂತರ ಪ್ರದೇಶಗಳಲ್ಲಿ ದೇವಾಲಯ ನಿರ್ಮಾಣ ಮಾಡುವ ಮೂಲಕ ಸಮಾಜದಲ್ಲಿ ಉತ್ತಮವಾದ ಬೆಳವಣಿಗೆಗೆ ಪೂರಕವಾಗಿ ಭಾವನಾತ್ಮಕ ಸಂಬAಧವನ್ನು ಬೆಳೆಸುತ್ತದೆ. ಅಲ್ಲದೆ ಹಿರಿಯರು ಹಾಕಿಕೊಟ್ಟು ಧಾರ್ಮಿಕ ಚಿಂತನೆಗಳು ಇಂದಿನ ಸಮಾಜಕ್ಕೆ ಬಹು ಮುಖ್ಯವಾಗಿರುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತೊರೆನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಬಸವೇಶ್ವರ ಸ್ವಾಮಿಯ ನೂತನ ಗರ್ಭಗುಡಿಯ ಲೋಕಾರ್ಪಣೆ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯ ಕ್ರಮದ ಗರ್ಭಗುಡಿ ಉದ್ಘಾಟನೆಯನ್ನು ನೆರವೇರಿಸಿ ಮಾತಾನಾಡಿದರು.

ಗ್ರಾಮಗಳಲ್ಲಿ ದೇವಾಲಯಗಳು ಇರುವ ಮೂಲಕ ಗ್ರಾಮಸ್ಥರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಚಿಂತನೆಯನ್ನು ನಡೆಸಲು ಅನುಕೂಲವಾಗುತ್ತದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮಿ ವಹಿಸಿ ಆಶೀರ್ವಚನ ನೀಡಿದರು

ಮುಖ್ಯ ಅತಿಥಿಯಾಗಿ ಅಗಮಿಸಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಮಾತನಾಡಿ, ಗ್ರಾಮಗಳಲ್ಲಿ ಧಾರ್ಮಿಕ ಮಹೋತ್ಸವ ಗಳ ಆಚರಣೆಗಳು, ದೇವರ ಪೂಜೆ ಇವುಗಳು ಬಹು ದೊಡ್ಡ ಪರಂಪರೆ ಯಾಗಿವೆ. ಇವುಗಳ ಉಳಿಸುವಿಕೆ ಮತ್ತು ಪೂಜಾ ಕಾರ್ಯವನ್ನು ನಡೆಸುವುದರಿಂದ ಗ್ರಾಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸರಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ದೇವಾಲಯ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸಹಬಾಳ್ವೆಯ ಜೀವನ ನಡೆಸಲು ಅನುಕೂಲ ಕಲ್ಪಿಸಿದಂತೆ ಆಗುತ್ತದೆ. ಇಂತಹ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಹೆಚ್.ಆರ್. ಶ್ರೀನಿವಾಸ, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷೆ ಎಂ.ಟಿ. ಬೇಬಿ, ದೇವಾಲಯ ಸಮಿತಿಯ ಉಪಾಧ್ಯಕ್ಷ ಟಿ.ಟಿ. ಪ್ರಕಾಶ್, ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರಿ, ಖಜಾಂಚಿ ಜಗದೀಶ್, ಗ್ರಾ.ಪಂ. ಸದಸ್ಯ ದೇವರಾಜ್, ನಿರ್ದೇಶಕರಾದ ಟಿ.ಸಿ. ಶಿವಕುಮಾರ್, ಗೋವಿಂದ, ಶಿವಾನಂದ, ಮಂಜುನಾಥ, ಶಿವಪ್ಪ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.