ಕೂಡಿಗೆ, ಜ. ೧೮: ಇಲ್ಲಿನ ಕ್ರೀಡಾ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೩೦ ಮಂದಿಗೆ ೧೦ ದಿನಗಳ ಕಾಲ ನಡೆದ ಗುರುತುಗಾರ ತರಬೇತಿ ಶಿಬಿರವು ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ನೆರವೇರಿಸಿ ಮಾತನಾಡಿದರು.
ಈ ತರಬೇತಿ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ೩೦ ಮಂದಿ ಭಾಗವಹಿಸಿದ್ದರು. ಈ ತರಬೇತಿ ಶಿಬಿರದಲ್ಲಿ ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ವಾಲಿಬಾಲ್ ಮೈದಾನ ಸಿದ್ಧತೆ ಬಗ್ಗೆ ತರಬೇತಿಯನ್ನು ಆಯಾ ಕ್ರೀಡೆಯ ತರಬೇತಿದಾರರು ನೀಡಿದರು.