ಚೆಟ್ಟಳ್ಳಿ, ಫೆ. ೧೯: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಡಿಯಲ್ಲಿ ಬರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯಲ್ಲಿ ಕ್ಷೇತ್ರ ಪ್ರಾತ್ಯಕ್ಷತೆ ಮತ್ತು ರೈತರೊಡನೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಭಾ.ತೋ.ಸ.ಸಂಸ್ಥೆಯ ನಿರ್ದೇಶಕ ಡಾ. ಎಂ. ಆರ್. ದಿನೇಶ್ ನೆರವೇರಿಸಿದರು. ಕ್ಷೇತ್ರ ಪ್ರಾತ್ಯಕ್ಷತೆಯಲ್ಲಿ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಜಿ. ಚೆಂಗಪ್ಪ - ನಿವೃತ್ತ ಕುಲಪತಿಗಳು ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು, ಬೋಸ್ ಮಂದಣ್ಣ - ಮಾಜಿ ಉಪಾಧ್ಯಕ್ಷರು ಕಾಫಿ ಮಂಡಳಿ, ಡಾ. ಪ್ರಸನ್ನ ಕುಮಾರ್ - ನಿವೃತ್ತ ಕೃಷಿ ವಿಜ್ಞಾನಿ, ಹಾಗೂ ಡಾ. ಸಾಜು ಜಾರ್ಜ್ - ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯ ಉಸ್ತುವಾರಿ ಮುಖ್ಯಸ್ಥರು ಹಾಗೂ ಕೊಡಗು ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕ, ಕೃಷಿ ಉಪನಿರ್ದೇಶಕರು, ತೋಟಗಾರಿಕ ಉಪ ನಿರ್ದೇಶಕರು, ತೋಟಗಾರಿಕ ಸಹಾಯಕ ನಿರ್ದೇಶಕರು ಹಾಗೂ ಕೃಷಿ ಮತ್ತು ತೋಟಗಾರಿಕ ವಿಜ್ಞಾನಿಗಳು ಉಪಸ್ಥಿತರಿದ್ದರು. ಚೆಟ್ಟಳ್ಳಿ, ಫೆ. ೧೯: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಡಿಯಲ್ಲಿ ಬರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯಲ್ಲಿ ಕ್ಷೇತ್ರ ಪ್ರಾತ್ಯಕ್ಷತೆ ಮತ್ತು ರೈತರೊಡನೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಭಾ.ತೋ.ಸ.ಸಂಸ್ಥೆಯ ನಿರ್ದೇಶಕ ಡಾ. ಎಂ. ಆರ್. ದಿನೇಶ್ ನೆರವೇರಿಸಿದರು. ಕ್ಷೇತ್ರ ಪ್ರಾತ್ಯಕ್ಷತೆಯಲ್ಲಿ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಜಿ. ಚೆಂಗಪ್ಪ - ನಿವೃತ್ತ ಕುಲಪತಿಗಳು ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು, ಬೋಸ್ ಮಂದಣ್ಣ - ಮಾಜಿ ಉಪಾಧ್ಯಕ್ಷರು ಕಾಫಿ ಮಂಡಳಿ, ಡಾ. ಪ್ರಸನ್ನ ಕುಮಾರ್ - ನಿವೃತ್ತ ಕೃಷಿ ವಿಜ್ಞಾನಿ, ಹಾಗೂ ಡಾ. ಸಾಜು ಜಾರ್ಜ್ - ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯ ಉಸ್ತುವಾರಿ ಮುಖ್ಯಸ್ಥರು ಹಾಗೂ ಕೊಡಗು ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕ, ಕೃಷಿ ಉಪನಿರ್ದೇಶಕರು, ತೋಟಗಾರಿಕ ಉಪ ನಿರ್ದೇಶಕರು, ತೋಟಗಾರಿಕ ಸಹಾಯಕ ನಿರ್ದೇಶಕರು ಹಾಗೂ ಕೃಷಿ ಮತ್ತು ತೋಟಗಾರಿಕ ವಿಜ್ಞಾನಿಗಳು ಉಪಸ್ಥಿತರಿದ್ದರು.
ಸಂವಾದ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಎಂ.ಆರ್.ದಿನೇಶ್ ಅವರು ಹೇಳಿದರು.
ಬೆಳೆಗಾರರು ಮೊದಲು ತಮ್ಮ ಪ್ರದೇಶದ ಹವಾಗುಣ ಅರಿತುಕೊಳ್ಳಬೇಕು ಬಳಿಕ ಸೂಕ್ತ ತೋಟಗಾರಿಕಾ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕರು ನುಡಿದರು.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಪಿ.ಜಿ ಚೆಂಗಪ್ಪ ಅವರು ಮಾತನಾಡಿ ರೈತರು ಮಾರುಕಟ್ಟೆಗೆ ಹೊಂದಿಕೊಳ್ಳುವ ಬೆಳೆ ಬೆಳೆಯುವ ಕಡೆ ಹೆಚ್ಚಿನ ಒತ್ತು ನೀಡಬೇಕು. ಕೃಷಿ ಬಗ್ಗೆ ತಿಳಿದುಕೊಳ್ಳದೇ ಕೃಷಿ ಮಾಡುತ್ತೇನೆ ಎಂದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಲಾಂಗಾನ್, ಅರ್ಕಾ ಸುಕೋಮಲ್(ತಿಂಗಳ ಹುರುಳಿ), ಅರ್ಕಾ ಮುತ್ತು(ಕಲ್ಲಂಗಡಿ), ಲಿಚ್ಚಿ, ಪಟ್ಟಿಪಾನ್(ವಿದೇಶಿ ಕುಂಬಳಕಾಯಿ), ಅರ್ಕಾ ಚಂದನ್(ಸಿಹಿ ಕುಂಬಳ), ಅರ್ಕಾ ಸೂರ್ಯಮುಖಿ(ಸಿಹಿ ಕುಂಬಳ), ಅರ್ಕಾ ಸಿರಿ(ಕರ್ಬೂಜ), ಅರ್ಕಾ ಮಂಗಳ(ಮೀಟರ್ ಅಲಸಂದೆ), ಅರ್ಕಾ ಹರ್ಷಿತ್(ಬದನೆಕಾಯಿ), ಅರ್ಕಾ ಕೇಶವ್(ಬದನೆಕಾಯಿ) ಮತ್ತಿತರ ಬೆಳೆಗಳು ತೋಟಗಾರಿಕಾ ಮೇಳದಲ್ಲಿ ಆಕರ್ಷಣೀಯವಾಗಿದ್ದವು.
ಬೆಂಗಳೂರಿನ ಐ.ಸಿ.ಎ-ಐ.ಐ.ಹೆಚ್.ಆರ್. ಹಣ್ಣಿನ ಬೆಳೆಗಳ ವಿಭಜನೆಯ ಮುಖ್ಯಸ್ಥ ಡಾ.ರೆಜು ಎಂ. ಕುರಿಯನ್, ಐ.ಐ.ಎಚ್. ಆರ್. ತರಕಾರಿ ಬೆಳೆಗಳ ವಿಭಜನೆಯ ಮುಖ್ಯಸ್ಥ ಡಾ.ಕೆ.ಮಾದವಿ ರೆಡ್ಡಿ, ಪ್ರಧಾನ ವಿಜ್ಞಾನಿಗಳು ಮತ್ತು ನೋಡಲ್ ಅಧಿಕಾರಿಗಳಾದ ಡಾ. ಟಿ.ಎಸ್.ಅಘೋರ, ಪಿ.ಹೆಚ್.ಟಿ ಮತ್ತು ಎ.ಇ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಕೆ.ನಾರಾಯಣ ಇವರು ರೈತರಿಗೆ ಬೆಳೆಗಳಿಗೆ ಸಂಬAಧಿಸಿದAತೆ ಅನೇಕ ಮಾಹಿತಿಗಳನ್ನು ನೀಡಿದರು.
ವಿಜ್ಞಾನಿಗಳಾದ ಡಾ.ಪ್ರಸನ್ನ ಕುಮಾರ್, ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರದ ವಿಜ್ಞಾನಿಗಳಾದ ಡಾ.ಎಂ ಸೆಂದಿಲ್ ಕುಮಾರ್, ಡಾ.ವಿ.ವೆಂಕಟರಾವನಪ್ಪ, ಡಾ.ಕೆ.ವಿ.ವಿರೇಂದ್ರ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ ಶೇಕ್, ಉಪ ನಿರ್ದೇಶಕ ರಾಜು, ಶಶಿಧರ್ ಇತರರು ಇದ್ದರು. ಗೋಣಿಕೊಪ್ಪಲಿನ ಕೊಡಗು ವಿಜ್ಞಾನ ಕೇಂದ್ರ ಮತ್ತು ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಅವರು ಸ್ವಾಗತಿಸಿದರು.