ಗೋಣಿಕೊಪ್ಪಲು, ಫೆ. ೧೮: ಕಾಫಿ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೊಡಗಿನ ವೀರಾಜಪೇಟೆ, ಕುಟ್ಟ, ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪ ಸೇರಿದಂತೆ ಮುಖ್ಯ ಪಟ್ಟಣಗಳಲ್ಲಿ ಕಾಫಿ ಕ್ಯೂರಿಂಗ್ ವರ್ಕ್ಸ್ಗಳು ಪ್ರಾರಂಭಗೊAಡವು. ಇದರಿಂದ ಅತೀ ಸಣ್ಣ ಕಾಫಿ ಬೆಳೆಗಾರರಿಗೆ ಹಾಗೂ ದೊಡ್ಡ ಬೆಳೆಗಾರರಿಗೆ ತಾವು ಬೆಳೆದ ಗುಣಮಟ್ಟದ ಕಾಫಿಗೆ ಉತ್ತಮ ಬೆಲೆ ಸಿಗುವಂತಾಗಿತ್ತು. ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶಗಳು ಲಭ್ಯವಾಯಿತು. ಇದರಿಂದ ಅನೇಕ ಕುಟುಂಬಗಳು ಜೀವನ ಕಂಡುಕೊAಡವು.
ಕೊಡಗಿನಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಕಾಫಿ ಬೆಳೆಯು ಬೇರೆ ಯಾವುದೇ ರಾಜ್ಯದಲ್ಲಿ ಬೆಳೆಯುತ್ತಿಲ್ಲ. ಇದರಿಂದಾಗಿ ಕೊಡಗಿನ ಕಾಫಿಗೆ ಹೊರ ರಾಜ್ಯ, ರಾಷ್ಟçಮಟ್ಟದಲ್ಲಿ ಉತ್ತಮ ಹೆಸರಿದೆ. ಗುಣಮಟ್ಟದ ಕಾಫಿಯನ್ನು ಖರೀದಿಸಲು ಗಡಿಭಾಗದ ರಾಜ್ಯದಿಂದ ಕೆಲವು ವ್ಯಾಪಾರಸ್ಥರು ಸಹಜವಾಗಿಯೇ ಕೊಡಗಿನ ಪ್ರಮುಖ ಪಟ್ಟಣಗಳಿಗೆ ಆಗಮಿಸಿ ವ್ಯಾಪಾರ ಆರಂಭಿಸಿದರು. ಇದರಿಂದ ಕೊಡಗಿನ ಕಾಫಿ ಬೆಳೆಗಾರರ ಸ್ನೇಹಚಾರ ಹೊಂದಿದ ಅಂತಹ ವ್ಯಾಪಾರಿಗಳು ಇಲ್ಲಿ ಬರುವ ಲಾಭಾಂಶವನ್ನು ಅವರ ರಾಜ್ಯದಲ್ಲಿ ವಿನಿಯೋಗಿಸಲು ಆರಂಭಿಸಿದರು.
ಆರಂಭದ ದಿನಗಳಲ್ಲಿ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದ ಕಾಫಿ ವ್ಯಾಪಾರಸ್ಥರು ತದನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊಡಗಿನ ವ್ಯಾಪಾರದ ಮೇಲೆ ಹಿಡಿತ ಸಾಧಿಸಲಾರಂಭಿಸಿದರು.
ವಿಶೇಷವಾಗಿ ದಕ್ಷಿಣ ಕೊಡಗಿನ ವಾಣಿಜ್ಯ ಕೇಂದ್ರ ಗೋಣಿಕೊಪ್ಪ ಸುತ್ತಮುತ್ತಲಿನಲ್ಲಿ ಕಾಫಿ ಕ್ಯೂರಿಂಗ್ ವರ್ಕ್ಸ್ಗಳನ್ನು ಇಟ್ಟು ಸಣ್ಣ ರೈತರಿಗೆ ಸಹಾಯವಾಗುವ ಮೂಲಕ ಸ್ಥಳೀಯ ಜನರಿಗೆ ಉದ್ಯೋಗವಕಾಶ ನೀಡಿದ್ದರು. ಇದೀಗ ಇಂತಹ ಕ್ಯೂರಿಂಗ್ ವರ್ಕ್ಸ್ಗಳನ್ನು ಬೆಳೆಗಾರರ ಹಿಡಿತದಿಂದ ತಪ್ಪಿಸಿ ಕೆಲವು ಆಮಿಷಗಳೊಂದಿಗೆ ಆ ವ್ಯಾಪಾರಿಗಳು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇಲ್ಲಿ ನಡೆಯುವ ವ್ಯವಹಾರವು ಬೇರೆಯವರಿಗೆ ತಿಳಿಯದಂತೆ ಎಚ್ಚರವಹಿಸಿ ಹೊರ ರಾಜ್ಯದ ನೌಕರರನ್ನು ತಮ್ಮ ಕ್ಯೂರಿಂಗ್ ವರ್ಕ್ಸ್ನಲ್ಲಿ ಕೆಲಸಕ್ಕೆ ನೇಮಕ ಮಾಡಿದ್ದಾರೆ.
ತಮಗೆ ಬೇಕಾದವರಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ಮುಖ್ಯ ಪಟ್ಟಣಗಳಲ್ಲಿ, ರಸ್ತೆ ಬದಿಗಳಲ್ಲಿ ಕಾಫಿ ಖರೀದಿಸುವ ಕೇಂದ್ರವನ್ನು ಆರಂಭಿಸಿ ಇವರ ಮೂಲಕ ಸಣ್ಣ ಬೆಳೆಗಾರರು ತರುವ ಕಾಫಿಯನ್ನು ಕಡಿಮೆ ದರಕ್ಕೆ ಪಡೆದು ಈ ಕಾಫಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದಂಧೆ ಮಾಮೂಲಿಯಾಗಿದೆ. ದೊಡ್ಡ ರೈತರು ನ್ಯಾಯಯುತವಾದ ಬೆಲೆ ಸಿಗುವ ಅಧಿಕೃತ ಕಾಫಿ ಕ್ಯೂರಿಂಗ್‌ಗಳಿಗೆ ತಮ್ಮ ಕಾಫಿಯನ್ನು ಕಳುಹಿಸುತ್ತಿದ್ದಾರೆ. ಇದರಿಂದಾಗಿ ಅಂತರರಾಷ್ಟಿçÃಯ ಮಾರುಕಟ್ಟೆಯ ಬೆಲೆ ಇವರಿಗೆ ಲಭ್ಯವಾಗುತ್ತಿವೆ. ಆದರೆ ಅತೀ ಸಣ್ಣ ಕಾಫಿ ಬೆಳೆಯುವ ರೈತರು ನಗರ ಪ್ರದೇಶದ ರಸ್ತೆ ಬದಿಯಲ್ಲಿರುವ ಕಾಫಿ ಖರೀದಿ ಕೇಂದ್ರವನ್ನು ಅವಲಂಭಿಸಿದ್ದಾರೆ. ಸ್ಥಳೀಯ ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಾಲೀಕರು ದಿನನಿತ್ಯ ನಿಗದಿಪಡಿಸುವ ದರವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಮ್ಮ ಕ್ಯೂರಿಂಗ್ ವರ್ಕ್ಸ್ನಲ್ಲಿ ಕಾಫಿಯ ತೇವಾಂಶ ಹಾಗೂ ಔಟರ್ನ್ಗಳನ್ನು ಮುಂದಿಟ್ಟು ಕೊಂಡು ಸಣ್ಣ ಬೆಳೆಗಾರರನ್ನು ಸುಲಿಗೆ ಮಾಡುತ್ತಿರುವುದು ಮಾಮೂಲಿಯಾಗಿದೆ. ಈ ಬಗ್ಗೆ ಯಾರು ಕೂಡ ಚಕಾರ ಎತ್ತದೆ ಇರುವುದರಿಂದ ವಹಿವಾಟುಗಳು ಎಗ್ಗಿಲ್ಲದೆ ಸಾಗುತ್ತಿದೆ. - ಹೆಚ್.ಕೆ. ಜಗದೀಶ್