ಕುಶಾಲನಗರ, ಫೆ ೧೭: ಮನೆ ಕೆಲಸಕ್ಕಿದ್ದ ಯುವತಿಯೊಬ್ಬಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿ ರೇಣುಕಾ ಉತ್ತಪ್ಪ ಎಂಬವರು ತನ್ನ ತಂದೆ ತಾಯಿಗೆ ಸೇರಿದ ಚಿನ್ನಾಭರಣ ಕಳವಾಗಿರುವ ಬಗ್ಗೆ ದೂರು ನೀಡಿದ್ದು ಕಳವು ಮಾಲು ಪತ್ತೆಯಾಗಿದ್ದರೂ ಅದನ್ನು ವಶಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸದ್ದಾರೆ. ಗುಮ್ಮನಕೊಲ್ಲಿಯ ತಮಗೆ ಸೇರಿದ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಪರಿಚಯವಿದ್ದ ವ್ಯಕ್ತಿಗೆ ಮನೆಯನ್ನು ನೋಡಿಕೊಳ್ಳಲು ಬಿಟ್ಟಿದ್ದು ೨೦೨೦ ರ ಸೆಪ್ಟೆಂಬರ್ ತಿಂಗಳಲ್ಲಿ ತಾಯಿ ಮೃತಪಟ್ಟ ಸಂದರ್ಭ ಚಿನ್ನದ ಆಭರಣಗಳು ನಾಪತ್ತೆಯಾಗಿದ್ದವು. ನಂತರ ಅದೇ ಆಭರಣಗಳು ಮನೆ ನೋಡಿಕೊಳ್ಳುತ್ತಿದ್ದ ಆ ವ್ಯಕ್ತಿಯ ಎಂಬವರ ಮಗಳ ಕುತ್ತಿಗೆಯಲ್ಲಿ ಕಂಡುಬAದಿದ್ದು ಈ ಬಗ್ಗೆ ವಿಚಾರಣೆ ಮಾಡಿದಾಗ ಮಗಳು, ಆಕೆಯ ತಾಯಿ ಸೇರಿ ಕಳವು ಮಾಡಿರುವ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ೪೦ ಗ್ರಾಂ ಚಿನ್ನದ ಕೊಕ್ಕೆತಾತಿ ಸೇರಿದಂತೆ ಎರಡು ಚಿನ್ನದ ಖಡ್ಗ ೪೦ ಗ್ರಾಂ, ಉಂಗುರ ೨೪ ಗ್ರಾಂ, ಸೀರೆ, ನಗದು ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸ್ ದೂರು ನೀಡದಂತೆ ಮನವಿ ಮಾಡಿದ ಕಾರಣ ವಿಳಂಭವಾಗಿ ದೂರು ನೀಡಲಾಯಿತು. ಕಳವು ಮಾಡಿದ ವಸ್ತುಗಳ ಬೆಲೆಯನ್ನು ಹೊಂದಿಸಿ ಕೊಡುವುದಾಗಿ ಆರೋಪಿಗಳು ಒಪ್ಪಿದ್ದರೂ ಇದುವರೆಗೆ ಹಣ ನೀಡಿರುವುದಿಲ್ಲ ಎಂದು ಪೊಲೀಸ್ ಪುಕಾರಿನಲ್ಲಿ ರೇಣುಕಾ ಉತ್ತಪ್ಪ ಅವರು ಮಾಹಿತಿ ನೀಡಿದ್ದಾರೆ. ಒಟ್ಟು ಅಂದಾಜು ರೂ ೫ ಲಕ್ಷ ಮೌಲ್ಯದ ಚಿನ್ನಾಭರಣ ಇತರ ವಸ್ತುಗಳನ್ನು ತಕ್ಷಣ ಆರೋಪಿಗಳಿಂದ ವಶಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.