ಗೋಣಿಕೊಪ್ಪ ವರದಿ, ಫೆ. ೧೭: ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಅಲ್ಲಿನ ಗೋಪಾಲಸ್ವಾಮಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊಡಗಿನ ೫ ಕ್ರೀಡಾಪಟುಗಳಿಗೆ ೧೪ ಬಹುಮಾನ ಲಭಿಸಿದೆ.
೯ರ ವಯೋಮಿತಿ ಬಾಲಕರ ಸಿಂಗಲ್ಸ್ನಲ್ಲಿ ಬೊಪ್ಪಂಡ ವಿಶಾಲ್ ಉತ್ತಪ್ಪ ಪ್ರಥಮ, ೧೧ರ ವಯೋಮಿತಿಯ ಬಾಲಕರ ಸಿಂಗಲ್ಸ್ ಟೂರ್ನಿಯಲ್ಲಿ ಕೊಡಗಿನ ೫ ಕ್ರೀಡಾಪಟುಗಳಿಗೆ ೧೪ ಬಹುಮಾನ ಲಭಿಸಿದೆ.
೯ರ ವಯೋಮಿತಿ ಬಾಲಕರ ಸಿಂಗಲ್ಸ್ನಲ್ಲಿ ಬೊಪ್ಪಂಡ ವಿಶಾಲ್ ಉತ್ತಪ್ಪ ಪ್ರಥಮ, ೧೧ರ ವಯೋಮಿತಿಯ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದÀÄಕೊಂಡರು. ಬಾಲಕಿಯರಲ್ಲಿ ಬೊಪ್ಪಂಡ ದಿಯಾ ಭೀಮಯ್ಯ ೧೩ರ ವಯೋಮಿತಿಯ ಸಿಂಗಲ್ಸ್ ಹಾಗೂ ಡಬ್ಬಲ್ಸ್ನಲ್ಲಿ ಪ್ರಥಮ, ೧೫ರ ವಯೋಮಿತಿಯ ಡಬ್ಬಲ್ಸ್, ಮಿಕ್ಸ್ಡ್ ಡಬ್ಬಲ್ಸ್ನಲ್ಲಿ ಪ್ರಥಮ, ೧೫ರ ವಯೋಮಿತಿಯ ಸಿಂಗಲ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬಾಲಕರ ೧೭ರ ವಯೋಮಿತಿಯ ಸಿಂಗಲ್ಸ್ನಲ್ಲಿ ಮೊಣ್ಣಂಡ ಕಶ್ಯಪ್ ನಂಜಪ್ಪ ದ್ವಿತೀಯ, ೧೫ರ ವಯೋಮಿತಿಯ ಡಬ್ಬಲ್‌ನಲ್ಲಿ, ಬಾಲಕರ ಡಬ್ಬಲ್ಸ್ನಲ್ಲಿ ಮಾಚಂಗಡ ಲಕ್ಷ್ ಚೆಂಗಪ್ಪ ಪ್ರಥಮ, ೧೭ರ ವಯೋಮಿತಿಯ ಬಾಲಕರ ಸಿಂಗಲ್ಸ್ ಮತ್ತು ಡಬ್ಬಲ್ಸ್ನಲ್ಲಿ ಮೊಹಮ್ಮದ್ ಜೈಯದ್ ಪ್ರಥಮ, ೧೯ರ ವಯೋಮಿತಿಯ ಸಿಂಗಲ್ಸ್ ಮತ್ತು ಡಬ್ಬಲ್ಸ್ನಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ಇವರಿಗೆ ಮೇದುರ ಅರುಣ್ ಪೆಮ್ಮಯ್ಯ ತರಬೇತಿ ನೀಡಿದ್ದಾರೆ.