ಮಡಿಕೇರಿ, ಫೆ. ೧೭: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲಾ ಕೃಷಿ ಮೋರ್ಚಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಭಗವಾನ್, ಮಚ್ಚಂಡ ಪ್ರಕಾಶ್, ಸಂದೀಪ್ ಕೆ.ಎಂ., ಪೆಮ್ಮಣಮಾಡ ರಮೇಶ್, ಕೆ.ಎ. ನಂಜಪ್ಪ ಅವರುಗಳನ್ನು ನೇಮಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ್ ಕುಂದಳ್ಳಿ ಕಬೀರ್ ದಾಸ್ ವೀರಾಜಪೇಟೆ ಅವರುಗಳನ್ನು ನೇಮಿಸಲಾಗಿದೆ.
ಕಾರ್ಯದರ್ಶಿಗಳಾಗಿ ಮಚ್ಚಪಂಡ ಕಿರಣ್ ಪೂಣಚ್ಚ, ತಮ್ಮಯ್ಯ ಚೌಡ್ಲು, ಪೈಕೇರ ಮನೋಹರ್, ಹಾಕತ್ತೂರು ಪೂಣಚ್ಚ, ಶ್ರೀಕಾಂತ್ ಚೌಡ್ಲು ನೇಮಕಗೊಂಡಿದ್ದಾರೆ. ಕಾರ್ಯಾಲಯ ಕಾರ್ಯದರ್ಶಿಯಾಗಿ ಯಾಲದಾಳು ರವಿ ಪೂಣಚ್ಚ ನೇಮಕಗೊಂಡಿದ್ದು, ಖಜಾಂಚಿಯಾಗಿ ಶಿವಚಾಳಿಯಂಡ ಕಿಶೋರ್ ನೇಮಕವಾಗಿದ್ದಾರೆ.
ಸದಸ್ಯರುಗಳಾಗಿ, ದೇವರಾಜ್ ತೊರೆನೂರು, ಭಾನುಪ್ರಕಾಶ್ ಯಡೂರು, ಯು.ಎಂ, ಸೋಮಯ್ಯ, ಹೆಚ್.ಆರ್., ವೇಣುಗೋಪಾಲ್, ಎಂ.ಎ. ರಮೇಶ್, ಸೋಮೆಯಂಗಡ ಗಣೇಶ್ ನಲ್ಲೂರು, ಚೋಡುಮಾಡ ಜೀವನ್ ಬೆಗೂರ್, ಶಂಭಯ್ಯ ಕಡಗದಾಳು, ತುಮುತ್ತಜೀರ ರವಿ ಧರ್ಮಪಾಲ, ಕೆ.ಬಿ. ರಮೇಶ್ ಅಯ್ಯಂಗೇರಿ, ವಸಂತ ತೋರೆರ, ಆಶಾ ಪ್ರಕಾಶ್, ತೊಕ್ಕುಳಿ ಬಾಲಚಂದ್ರ, ಎ.ಹೆಚ್. ತಿಮ್ಮಯ್ಯ ಮತ್ತು ಎಸ್.ಜೆ. ರವಿಕುಮಾರ್, ಸುಧೀರ್ ಕಿರಗಂದೂರು ನೇಮಕಗೊಂಡಿದ್ದಾರೆ ಎಂದು ನಾಗೇಶ್ ಕುಂದಲ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.