ಮಡಿಕೇರಿ, ಫೆ. ೧೭: ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ಕೆ. ಬೋಯಿಕೇರಿ ನಿವಾಸಿ ಶ್ರೀದೇವಿ ಎಂ. ೨ ಚಿನ್ನದ ಪದಕ ಪಡೆದುಕೊಂಡರು. ಇವರು ಕೆ. ಬೋಯಿ ಕೇರಿಯ ಮುರುಗೇಶ್ ಹಾಗೂ ತುಳಸಿ ದಂಪತಿಯ ಪುತ್ರಿ. ಇಲ್ಲಿನ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.