ಕುಶಾಲನಗರ, ಫೆ ೧೭: ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಅನಾಥ ಕಾರೊಂದು ನಿಲುಗಡೆಗೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕೆಲವು ದಿನಗಳಿಂದ ಪಾಚಿ ಕಲರ್ ಮಾರುತಿ ಓಮ್ನಿ (ಕೆಎ.೧೨ ಎಂ.೮೩೧೬) ಖಾಲಿ ನಿವೇಶನದಲ್ಲಿ ಕಂಡುಬAದಿದ್ದು ಇದರ ವಾರಸುದಾರರು ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ನಿವಾಸಿ ಶ್ರೀಹರ್ಷ ಎಂಬವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.