ಮಡಿಕೇರಿ, ಫೆ. ೧೭: ಯುವ ಜನಾಂಗದಲ್ಲಿ ಶಿಸ್ತು, ರಾಷ್ಟಿçÃಯ ಐಕ್ಯತಾ ಮನೋಭಾವ, ಸಮಾಜಮುಖಿ ನಾಯಕತ್ವ ಬೆಳೆಸುವ ಮೂಲಕ ಎನ್.ಸಿ.ಸಿ.ಯ ಪ್ರತಿಷ್ಠೆಯನ್ನು ಹೆಚ್ಚಿಸುವಂತಹ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅತ್ಯುತ್ತಮ ಎನ್‌ಸಿಸಿ ಅಧಿಕಾರಿಗಳಿಗೆ ಕೊಡಮಾಡುವ ಪ್ರತಿಷ್ಟಿತ ಮುಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ರಾಘವ. ಬಿ. ಇವರಿಗೆ ನೀಡಿ ಗೌರವಿಸಲಾಗಿದೆ.
ಇವರು ೨೦೨೦-೨೧ನೇ ಸಾಲಿನ ಮುಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕ ಪಡೆದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದ ಏಕೈಕ ಅಧಿಕಾರಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಎನ್‌ಸಿಸಿ ೧೯ನೇ ಕರ್ನಾಟಕ ಬೆಟಾಲಿಯನ್‌ನ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಇವರು ಪ್ರಶಸ್ತಿ ಮತ್ತು ಪದಕವನ್ನು ರಾಘವ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನವದೀಪ್ ಸಿಂಗ್ ಬೇಡಿ, ಸುಬೇದಾರ್ ಮೇಜರ್ ಸುನಿಲ್‌ಕುಮಾರ್ ಎಂ.ಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.