ಭಾಗಮಂಡಲ, ಫೆ. ೧೭: ನಾವು ಸೇವಿಸಿದ ಆಹಾರವನ್ನು ಜೀವಕೋಶಕ್ಕೆ ಕಳುಹಿಸುವಲ್ಲಿ ರಕ್ತದ ಪಾತ್ರ ಪ್ರಮುಖವಾದುದು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮಂಜುನಾಥ ಹೇಳಿದರು.

ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಕ್ಕೂಟದ ಮೊದಲ ಕಾರ್ಯಕ್ರಮ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಮಾತನಾಡಿ, ಒಕ್ಕೂಟದ ಪ್ರಥಮ ಕಾರ್ಯಕ್ರಮ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಆಯೋಜಿಸಿದ್ದು ಇನ್ನು ಮುಂದೆ ಕ್ರೀಡೆ, ಶಿಕ್ಷಣ ಮುಂತಾದ ಚಟುವಟಿಕೆಗಳಿಗೆ ಆದ್ಯತೆ ನೀಡುವಂತಾಗಬೇಕು. ಭಾಗಮಂಡಲ ನಾಡಿಗೆ ಮೂಲಭೂತ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಇತರ ಸಂಘ ಸಂಸ್ಥೆಗಳೊAದಿಗೆ ಜೊತೆ ಸೇರಿ ಪ್ರಯತ್ನಿಸಿ ಜನಾಂಗದ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು. ರಕ್ತದಾನ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಮಾತನಾಡಿ, ಒಕ್ಕೂಟದ ಪ್ರಥಮ ಕಾರ್ಯಕ್ರಮ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಆಯೋಜಿಸಿದ್ದು ಇನ್ನು ಮುಂದೆ ಕ್ರೀಡೆ, ಶಿಕ್ಷಣ ಮುಂತಾದ ಚಟುವಟಿಕೆಗಳಿಗೆ ಆದ್ಯತೆ ನೀಡುವಂತಾಗಬೇಕು. ಭಾಗಮಂಡಲ ನಾಡಿಗೆ ಮೂಲಭೂತ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಇತರ ಸಂಘ ಸಂಸ್ಥೆಗಳೊAದಿಗೆ ಜೊತೆ ಸೇರಿ ಪ್ರಯತ್ನಿಸಿ ಜನಾಂಗದ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು. ರಕ್ತದಾನ ಶಿಬಿರದ ಸಂಚಾಲಕರಾಗಿ ಹೊದ್ದೇಟಿ ಸುಧೀರ್ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು ದಾನಿಗಳಾಗಿ ಡಾ. ಮುರಳಿ, ರವೀಂದ್ರ ನಿಡ್ಯಮಲೆ, ಅಶ್ವತ್ಥ ಕುದುಕುಳಿ ಸಹಕರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಮಡಿಕೇರಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪೊನ್ನಮ್ಮ, ಒಕ್ಕೂಟದ ಉಪಾಧ್ಯಕ್ಷ ದಯಾನಂದ ಕೂಡಕಂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕಾರ್ಯದರ್ಶಿ ನಿಡ್ಯಮಲೆ ಚಲನ್ ಉಪಸ್ಥಿತರಿದ್ದ ಶಿಬಿರದಲ್ಲಿ ಮೂವರು ದಂಪತಿಗಳು ಸೇರಿದಂತೆ ೫೯ ಜನರು ಸ್ವಯಂಪ್ರೇರಿತ ರಾಗಿ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾವೇರಿಮನೆ ಧರಣಿ ಪ್ರಾರ್ಥಿಸಿದರು. ಚೇತನ್ ಕೂಡಕಂಡಿ ಕಾರ್ಯಕ್ರಮ ನಿರೂಪಿಸಿ, ಸುಧೀರ್ ಹೊದ್ದೇಟಿ ಸ್ವಾಗತಿಸಿ, ಜಯ ಚಿಟ್ಟಿಯಪ್ಪ ವಂದಿಸಿದರು.