ಪೊನ್ನAಪೇಟೆ, ಫೆ. ೧೭: ಮೊದಲನೇ ವರ್ಷದ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ತಾ. ೧೯ ರಿಂದ ೨೧ ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ವ್ಯಾಪ್ತಿಯ ೧೦ ತಂಡಗಳು ಭಾಗವಹಿಸಲಿವೆ. ರಮೇಶ್ ಮಾಲೀಕತ್ವದ ಸೈಕ್ಲೋನ್ ಕ್ರಿಕೆಟರ್ಸ್, ರಹೀಶ್ ಮತ್ತು ಸಫೀಕ್ ಮಾಲೀಕತ್ವದ ಆಲ್ ಸ್ಟಾರ್, ಬಿನೀಶ್ ಮಾಲೀಕತ್ವದ ಅವೆಂಜರ್ಸ್, ಶರತ್ ಮಾಲೀಕತ್ವದ ಆರ್.ಕೆ. ಬುಲ್ಡೋಜರ್ಸ್, ಶಂಕರ್ ಮತ್ತು ಬಾಬು ಮಾಲೀಕತ್ವದ ಬ್ಲಾಕ್ ಕೋಬ್ರಾಸ್, ಹ್ಯಾರಿ ಮಾಲೀಕತ್ವದ ಡೈಮಂಡ್ ಸ್ಟಾರ್, ವೇಲು ಮುರುಗನ್ ಮಾಲೀಕತ್ವದ ಸೂಪರ್ ಕಿಂಗ್ಸ್, ಸಫೀರ್ ಮತ್ತು ನದೀಮ್ ಮಾಲೀಕತ್ವದ ವೈ.ಸಿ.ಪಿ ಕ್ರಿಕೆಟರ್ಸ್, ಅಮ್ಮತ್ತೀರ ಸುರೇಶ್ ಮಾಲೀಕತ್ವದ ಬೋಜಿ ಕ್ರಿಕೆಟರ್ಸ್, ಕಾಕಮಾಡ ಅಜಿತ್ ಮಾಲೀಕತ್ವದ ಎ.ಜೆ. ಬಾಯ್ಸ್ ತಂಡಗಳು ಪಿ.ಪಿ.ಎಲ್. ಚಾಂಪಿಯನ್‌ಶಿಪ್ ಸೆಣಸಾಟ ನಡೆಸಲಿವೆ.